‘ಅದು ಈ ರಾಜ್ಯದ ಹಾಗು ದೇಶದ ಪ್ರತಿಯೊಬ್ಬರ ಆಕಾಂಕ್ಷೆಯಾಗಿತ್ತು…’ – ಎಸ್ ಆರ್ ಶ್ರೀನಿವಾಸ್

ಅನ್ನಧಾನ ಮಾಡಿದರೆ ಬಡವರ ಕೇವಲ ಒಂದು ಹೊತ್ತಿನ ಹಸಿವು ನೀಗುತ್ತದೆ. ಆದರೆ ವಿಧ್ಯಾಧಾನ ಮಾಡಿದರೆ, ಆ ಮಕ್ಕಳ ಇಡೀ ಜೀವನ ರೂಪುಗೊಳ್ಳುತ್ತದೆ. ಈ ರೀತಿ ಸಾವಿರಾರು ಮಕ್ಕಳಿಗೆ ವಿಧ್ಯಾಧಾನ ಮಾಡಿರುವ ತ್ರಿವಿಧ ದಾಸೋಹಿ, ಅತ್ಯಂತ ನಿಷ್ಕಲ್ಮಶ ವ್ಯಕ್ತಿತ್ವದ ಸಿದ್ದಗಂಗ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾದ ಬಳಿಕವಾದರೂ ಮುನುಕುಲಕ್ಕೆ ಅವರ ನಿಸ್ವಾರ್ತ ಸೇವೆಯನ್ನು ಗುರುತಿಸಿ ‘ಭಾರತ ರತ್ನ’ ಪ್ರಶಸ್ತಿ ನೀಡಬಹುದು ಎಂದು ಪ್ರತಿಯೊಬ್ಬರೂ ಕಾತುರದಿಂದ ಕಾಯುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ.

ಇದರ ಬಗ್ಗೆ ಸಣ್ಣ ಕೈಗಾರಿಕ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿ ಗೌರವ ಸೂಚಿಸಬೇಕು ಎಂಬುದು ಈ ರಾಜ್ಯದ ಹಾಗೂ ಈ ದೇಶದ ಪ್ರತಿಯೊಬ್ಬರ ಆಕಾಂಕ್ಷೆಯಾಗಿತ್ತು. ಅವರಿಗೆ ಭಾರತ ರತ್ನ ನೀಡದಿರುವುದು ಈ ದೇಶದ ದುರದೈವ ಎಂದರೆ ತಪ್ಪಾಗುವುದಿಲ್ಲ. ಬೇರೆ ಅವರಿಗೆ ಕೊಟ್ಟರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ, ವಸತಿ, ಊಟ ಹೀಗೆ ಎಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಅರ್ಹ ವ್ಯಕ್ತಿ, ಶಿವಕುಮಾರ ಸ್ವಾಮೀಜಿಯವರಿಗೆ ಈ ಪ್ರಶಸ್ತಿ ತಪ್ಪಿದ್ದು ನಮಗೆ ನಿಜಕ್ಕೂ ಆಘಾತಕಾರಿ ಸಂಗತಿ. ಈ ವಿಷಯದ ಕುರಿತು ಸಿಎಂ ಕುಮಾರಸ್ವಾಮಿ ಅವರು ಸಹ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಯಾಕೆ ಈ ರೀತಿ ಮಾಡಿದೆ ಎಂದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿಯಾದರು ಅವರ ಸೇವೆಯನ್ನು ಗುರುತಿಸಲಿ ಎಂದು ಅಪೇಕ್ಷೆಸುತ್ತೇನೆ ಎಂದು ಹೇಳಿದರು.

Leave a Reply