ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉರಳಿದರೆ, ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನು ಗೊತ್ತಾ…?!

ಸುಮಾರು 60 ವರ್ಷಗಳ ಸುಧೀರ್ಘ ಅವಧಿ ದೇಶವನ್ನು ಆಳಿದ್ದ ಕಾಂಗ್ರೆಸ್ ಪಕ್ಷ 2014ರ ಚುನಾವಣೆಯಲ್ಲಿ 44 ಸೀಟ್ ಗಳನ್ನು ಪಡೆದುಕೊಂಡು ಕೇವಲ 3 ರಾಜ್ಯಗಳನ್ನು ಉಳಿಸಿಕೊಳ್ಳಲು ಸಹ ಮುಕ್ಕರಿಯಬೇಕಾದಂತ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿ ಮುಖಭಂಗ ಅನುಭವಿಸಿತು. ಇಡೀ ದೇಶವೇ ಕಾಂಗ್ರೆಸ್ ಸೋಲನ್ನು ಸಂಭ್ರಮಿಸುತಿತ್ತು. ಇದೇ ವೇಳೆ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ಎಂಬ ಮಹಾ ಸಮರ ಸಜ್ಜಾಯಿತು.

ಈ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ(ನಿರೀಕ್ಷಿತ) ಕಾದಿತ್ತು. ಕರ್ನಾಟಕದಲ್ಲಿ ಕೊಂಗ್ರೆಸ್ ಸೋಲಿಗೆ, ಹಾಗೂ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ಬಾದಾಮಿಯಲ್ಲೇ ಹೀನಾಯವಾಗಿ ಸೋಲಲು ಎರಡು ಅಂಶಗಳು ಕಾರಣವಾಯಿತು. ಒಂದು, ದೇಶದಲ್ಲಿ ಮೋದಿ ಅಲೆ ಇನ್ನೂ ತಣ್ಣಗಾಗಿರಲಿಲ್ಲ. ದೇಶದ ಜನರಲ್ಲಿ ಮೋದಿ ಏನಾದರು ಮಾಡೇ ಮಾಡುತ್ತಾರೆ ಎಂಬ ನಂಬಿಕೆ ಇನ್ನೂ ಜನರಲ್ಲಿ ಪ್ರಭಲವಾಗಿ
(ಈಗಲೂ ಇದ್ದರೆ ನಿಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ) ಇತ್ತು. ಮತ್ತೊಂದು ಕಡೆ, ಇರಲಾರದೆ ಇರುವ ಬಿಟ್ಟುಕೊಂಡಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯತೆ ಹೊಂದಿದ್ದ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ತಮ್ಮ ಭಾಷಣದ ವೇಳೆ ಅವಹೇಳನ ಮಾಡಿ, ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಫಲಿತಾಂಶವಾಗಿ ಕಾಂಗ್ರೆಸ್ ಪಕ್ಷಕ್ಕೆ, ಮತ್ತೊಂದು ರಾಜ್ಯ(ಕರ್ನಾಟಕ)ವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಬಿಜೆಪಿ ಪಕ್ಷದ ಪರ, ನಮ್ಮ ರಾಜ್ಯ ಕಂಡ ಅತ್ಯಂತ ಕಳಪೆ ನಾಯಕ ಬಿ.ಎಸ್ ಯಡಿಯೂರಪ್ಪನವರು ಕಣಕ್ಕೆ ಇಳಿದಿದ್ದರೂ ಸಹ, ಆ ಎರಡು ಅಂಶಗಳಿಂದ ಬಿಜೆಪಿ 104 ಸೀಟ್ ಗಳನ್ನು ಪಡೆದುಕೊಂಡು ಕಾಂಗ್ರೆಸ್ ಗೆ ಸೋಲುಣಿಸಿತು.

ಮುಳುಗುತ್ತಿದ್ದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ತಮ್ಮ ದೋಣಿ ಮುಳುಗೇ ಹೋದಂತೆ ಆಗಿತ್ತು. ಆಗ ಅವರ ಕೈ ಹಿಡಿದಿದ್ದು ರಾಜ್ಯದ ಅತ್ಯಂತ ಪ್ರಭಾವಿ ಪ್ರಾದೇಶಿಕ ಪಕ್ಷ, ಜೆಡಿಎಸ್. ಆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷ ಎಂದೇ ಹೇಳಿಕೊಳ್ಳಲು ನಾಚಿಗೆ ಪಡುವಂತ ದುಸ್ಥಿತಿಯಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದು ಜೆಡಿಎಸ್.

ಒಂದು ವೇಳೆ ಈಗ/ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಉರುಳಿದರೂ, ಜೆಡಿಎಸ್ ಪಕ್ಷಕ್ಕೆ ಯಾವ ನಷ್ಟವು ಇಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿದ ಕೊಂಚ ಮರ್ಯಾದೆಯೂ ಹೋಗುವುದರಲ್ಲಿ ಸಂಶಯವಿಲ್ಲ.

One thought on “ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉರಳಿದರೆ, ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನು ಗೊತ್ತಾ…?!

  1. Ramesh kumar says:

    ಆದ್ರೂ ಕಾಂಗಿ ಗಳಿಗೆ ಬುದ್ದಿ ಬಂದಿಲ್ಲ. ಸಿದ್ದು ಅಂತೆ ತಳ ಸುಡ್ತಯ್ತೆ..

Leave a Reply