ಅಧಿಕಾರಿಗಳು ಲಂಚ ಹಂಚಿಕೊಳ್ಳುತ್ತಿರುವ ವಿಡಿಯೋ ಈಗ ಫುಲ್ ವೈರಲ್…!

ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಈ ಕಾರ್ಯಕ್ಕೆ ಎಸಿಬಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಂತಂತ್ರ ನೀಡಿ ಎಲ್ಲಾ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಎಸಿಬಿ ದಾಳಿ ನಿರಂತರವಾಗಿ ನಡೆಯುತ್ತಿದ್ದು, ದಿನ ನಿತ್ಯ ಸರ್ಕಾರೀ ಅಧಿಕಾರಿಗಳ ಲಂಚಾವತಾರ ಬಹಿರಂಗವಾಗುತ್ತಿದೆ. ಆದರೂ ಎಚ್ಚೆತ್ತು ಕೊಳ್ಳದ ಬೇಲೂರು ತಾಲುಕಿನ ಅಧಿಕಾರಿಗಳ ಲಂಚ ಹಂಚಿಕೊಳ್ಳುವ ವಿಡಿಯೋ ಈಗ ವೈರಲ್ ಆಗಿದೆ.

ಬೇಲೂರು ತಾಲೂಕಿನ ಬೀಕ್ಕೊಡು ನಾಡ ಕಚೇರಿಯಲ್ಲಿ ಲಂಚಾವತಾರ ಹೆಚ್ಚಿದ್ದು, ಕೆಳ ಅಧಿಕಾರಿಗಳಿಂದ ಲಂಚ ಸಂಗ್ರಹಿಸುತ್ತಿರೊ ವೀಡಿಯೋ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ.

ಪ್ರತಿ ತಿಂಗಳು ಮೇಲಾಧಿಕಾರಿಗಳಿಗೆ 3 ಸಾವಿರ ಲಂಚ ಹಣ ಸಂಗ್ರಹಿಸಿ ನೀಡಬೇಕು. ಬೇಲೂರು ಉಪ ತಹಶಿಲ್ದಾರ್ ದ್ಯಾವೇಗೌಡ ಅವರಿಂದ ಲಂಚದ ಹಣ ಸಂಗ್ರಹಿಸುತ್ತಿದ್ದು, ಲಂಚ ಪಡೆಯುವ ದೃಶ್ಯ ಹಾಗೂ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇಲಾಧಿಕಾರಿಗಳಿಗೆ ಕೊಡಬೇಕು ಅಂತಾ ಹಣ ಪಡೆಯುವ ಉಪ ತಹಶೀಲ್ದಾರ್, ಮುಂದಿನ ತಿಂಗಳಿಂದ ಕೇಳ ಬಾರದು ಎಂದು ಹಣ ಕೊಡುವ ಕೆಳ ಹಂತಹ ಅಧಿಕಾರಿಗಳು ಮನವಿ ಮಾಡುತ್ತಿರುವ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ.

Leave a Reply