ಕರ್ನಾಟಕಕ್ಕೆ ಮೋದಿಯ ವಂಚನೆ ಹಿಂದಿರುವ ಅಸಲಿ ಕಾರಣ…!

ಪ್ರತಿಯೊಂದು ವಿಚಾರದಲ್ಲೂ ಕರ್ನಾಟಕವನ್ನು ಹಾಗೂ ಕನ್ನಡಿಗರನ್ನು ಕಡೆಗೆಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗ ಮತ್ತೆ ಅದನ್ನೇ ಮುಂದುವರೆಸಿದೆ. ಬರ ಪರಿಹಾರ ವಿತರಣೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ಅನ್ಯಾಯ ಮಾಡಿದೆ. ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ನೀಡಿ ಬೆಣ್ಣೆ ಹಚ್ಚಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಕೇವಲ 949.49 ಕೋಟಿ ರೂ. ನೀಡಿ ಸುಣ್ಣ ಮೆತ್ತಿದೆ.

ಯಾವ ರಾಜ್ಯಕ್ಕೆ ಎಷ್ಟು…? ಕರ್ನಾಟಕದ 156 ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಿಸಿ ಪರಿಹಾರಕ್ಕೆ ಮನವಿ ಮಾಡಿತ್ತು. ಇದೇ ರೀತಿ ಮಹಾರಾಷ್ಟ್ರ ಸರ್ಕಾರ ಕೂಡ ತಮ್ಮ ರಾಜ್ಯದ 151 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ, ಕೇಂದ್ರ ಸರ್ಕಾರದಿಂದ ಸಹಾಯಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಟ್ಟು ಬಿಡುಗಡೆ ಮಾಡಿದ 7,214 ಕೋಟಿ ರೂ. ಗಳಲ್ಲಿ ಬರೋಬ್ಬರಿ 4 ಸಾವಿರ ಕೋಟಿ ರೂ.ಗಳನ್ನು ಮಹಾರಾಷ್ಟ್ರಕ್ಕೆ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಕೇವಲ 949.49 ಕೋಟಿ ರೂ., ಆಂಧ್ರ ಪ್ರದೇಶಕ್ಕೆ 900 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 317 ಕೋಟಿ ರೂ., ಉತ್ತರ ಪ್ರದೇಶಕ್ಕೆ 191 ಕೋಟಿ ರೂ., ಗುಜರಾತ್ ಗೆ 127 ಕೋಟಿ ರೂ., ಪುದುಚೆರಿಗೆ 13 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಿದೆ.

ಮೋದಿ ಮಾಡಿದ ಅನ್ಯಾಯಕ್ಕೆ ಕಾರಣ..? ಇದರಲ್ಲಿ ಅನ್ಯಾಯವಾಗಿರುವುದು ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಿಗೆ ಮಾತ್ರ. ಅದರಲ್ಲೂ ಕರ್ನಾಟಕಕ್ಕೆ ಬಾರಿ ಹೊಡೆತ ಬಿದ್ದಿದೆ. ಮಹಾರಾಷ್ಟ್ರಕ್ಕಿಂತ ಹೆಚ್ಚು ಪ್ರದೇಶಗಳು ಕರ್ನಾಟಕದಲ್ಲಿ ಬರದಿಂದ ಪರದಾಡುತ್ತಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರವಾಮಿ ಅವರು ದಿಟ್ಟ ಆಡಳಿತ ನಡೆಸುತ್ತಿದ್ದು, ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸುವ ಸಾಮರ್ಥ್ಯ ಇದೆ ಎಂದು ಅರಿತಿರುವ ಅವರು, ಕೇವಲ 2500 ಕೋಟಿ ರೂ.ಗಳನ್ನೂ ಕೇಂದ್ರದಿಂದ ಮನವಿ ಮಾಡಿಕೊಂಡಿದ್ದರು. ಅದನ್ನು ನೆರವೇರಿಸಲು ಆಸಕ್ತಿ ತೋರದ ಕೇಂದ್ರ ಸರ್ಕಾರ, ನಮ್ಮ ರಾಜ್ಯಕ್ಕಿಂತ ಕಡಿಮೆ ಪ್ರದೇಶಗಳು ಬರ ಪೀಡಿತವಾಗಿರುವ ಮಹಾರಾಷ್ಟ್ರ ರಾಜ್ಯ ಬಿಜೆಪಿ ಆಡಳಿತದಲ್ಲಿ ಇದೆ ಎಂಬ ಏಕೈಕ ಕಾರಣಕ್ಕೆ 4000 ಕೋಟಿ ರೂ.ಗಳನ್ನೂ ಮಂಜೂರು ಮಾಡಿದೆ.


ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಕಡಿಮೆ ಹಣ ಯಾಕೆ…? ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿ ಇದ್ದರು, ಆ ರಾಜ್ಯಗಳಿಗೆ ಕಡಿಮೆ ಹಣ ಏಕೆ ಮಂಜೂರು ಮಾಡಲಾಗಿದೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಕಾರಣ ಇಷ್ಟೇ. ಈ ರಾಜ್ಯಗಳು ಮಿಕ್ಕ ನಾಲ್ಕು ರಾಜ್ಯಗಳು ಎದುರಿಸುತ್ತಿರುವಂತಹ ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ಹಾಗೂ ಕೇಂದ್ರ ಬಿಡುಗಡೆ ಮಾಡಿರುವ ಹಣದಲ್ಲಿ ಅವರು ಸುಲಭವಾಗಿ ಬರ ಪೀಡಿತ ಪ್ರದೇಶಗಳನ್ನು ನಿರ್ವಹಿಸಬಹುದು.

ಕೇಂದ್ರದ ವಿರುದ್ಧ ಗುಡುಗಿದ ಸಿಎಂ… ! ಕರ್ನಾಟಕ ಹಾಗು ಕನ್ನಡಿಗರ ಸಮಸ್ಯೆಗಳನ್ನು ನಿರಂತರವಾಗಿ ಕಡೆಗಣಿಸಿ ಪದೇ ಪದೇ ಅವಹೇಳನೆ ಮಾಡುತ್ತಿರುವುದನ್ನು ಸಹಿಸಲಾರದೆ ಸಿಎಂ ಕುಮಾರಸ್ವಾಮಿ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2,500 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ರಾಜ್ಯಕ್ಕೆ 900 ಕೋಟಿ ರೂ. ವಿತರಣೆ ಮಾಡಲಾಗಿದೆ. ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ನೀಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ನೀತಿ ಅನಿಸರಿಸಿದ್ದು, ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಬೇಸರ ಕೂಡ ವ್ಯಕ್ತ ಪಡಿಸಿದರು.

Leave a Reply