ಭೂಗತ ಪಾತಕಿ ರವಿ ಪೂಜಾರಿ ಬಂಧನ ಮಾಡಿಸಿದ್ದಕ್ಕೆ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಆಕ್ರೋಶ…!

ಖ್ಯಾತ ಉದ್ಯಮಿಗಳು ಹಾಗೂ ಗಣ್ಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿದ್ದ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸ್ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯೂಯಾಗಿದೆ.

ಫೋನ್ ಕರೆ ಮಾಹಿತಿ ಮೇರೆಗೆ ಆತ ಸೆನೆಗಲ್ ನಲ್ಲಿದ್ದಾನೆ ಎಂಬ ಮಾಹಿತಿ ಕಲೆಹಾಕಿ,
ಅಲ್ಲಿನ ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಏರ್ಪಡಿಸಿ, ಈತ ಸೆನೆಗಲ್ ನಲ್ಲಿ ಡಿಸೆಂಬರ್ 31 ರಂದು ಕ್ರಿಕೆಟ್ ಪಂದ್ಯಗಳನ್ನ ಏರ್ಪಡಿಸುವ ಬಗ್ಗೆ ಫೋಟೋ ಹಾಗೂ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ಪೊಲೀಸ್, ಭಾರತದ ವಿದೇಶಾಂಗ ಇಲಾಖೆ ಪ್ರತಿನಿಧಿಗಳ ಸಹಕಾರದೊಂದಿಗೆ ರವಿ ಪೂಜಾರಿಯಾ ಬಂಧನಕ್ಕೆ ಚಕ್ರವ್ಯೂಹ ರಚಿಸಿ ಜನವರಿ 19ರಂದು, ಒಂದು ಸಲೂನ್ ನಲ್ಲಿ ಬಂಧಿಸಲಾಯಿತು.

ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದೊಡನೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಈ ಕಾರ್ಯದಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಹಾಗೂ ಭಾರತದ ವಿದೇಶಾಂಗ ಇಲಾಖೆ ಪ್ರತಿನಿಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದು ನಮ್ಮ ಸರ್ಕಾರದ ಯಶಸ್ಸು ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

ಕುಮಾರಸ್ವಾಮಿ ಅವರ ಬೆಂಬಲದೊಂದಿಗೆ ಕರ್ನಾಟಕ ಪೊಲೀಸ್ ಮಾಡಿರುವ ಈ ಸಾಧನೆ ಕುರಿತು ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಿರುವಾಗ, ಬಿಜೆಪಿ ಪಕ್ಷದವರು ಮಾತ್ರ ಅಸೂಯೆಯಿಂದ ಉರಿದು ಬೀಳುತ್ತಿರುವುದು ಕಂಡು ಬರುತ್ತಿದೆ.

ಬಿಜೆಪಿ ನಾಯಕರು, ರವಿ ಪೂಜಾರಿ ಅವರ ಬಂಧನದ ಕುರಿತು ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಬಿಜೆಪಿ ಶಾಸಕರ ಈ ಪ್ರತಿಕ್ರಿಯೆ ಗಮನಿಸಿದರೆ, ಇವರಿಗು, ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಗು ಸಂಬಂಧ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Leave a Reply