‘ಅಪರಾಧಿಗಳಿಗೆ ರಕ್ಷಣೆ ಕೊಟ್ಟು, ಕುರ್ಚಿಯನ್ನು ಭದ್ರಪಡಿಸಿಕೊಂಡು ಕೂರುವವನು ನಾನಲ್ಲ’

ವಿದೇಶದಲ್ಲಿ ಅಡಗಿ ತನ್ನ ಅವ್ಯವಹಾರವನ್ನು ನಡೆಸುತ್ತಿದ್ದ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ಪತ್ತೆ ಹಚ್ಚಿ ಬಂಧಿಸಲು ಯಶಸ್ವಿಯಾಗಿರುವ ಕರ್ನಾಟಕ ಪೊಲೀಸ್ ನಡೆಸಿದ ಕಾರ್ಯಾಚರಣೆಯಾ ರೂವಾರಿ ಸಿಎಂ ಕುಮಾರಸ್ವಾಮಿ ಅವರು, ಕಂಪ್ಲಿ ಶಾಸಕ ಗಣೇಶ್ ರವರ ಬಂಧನದ ಬಗ್ಗೆ, ಇಂದು ಸುತ್ತೂರಿನಲ್ಲಿ ಆರಂಭಗೊಂಡಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿದರು.

ಪರಾಧಿಗಳಿಗೆ ರಕ್ಷಣೆ ಕೊಟ್ಟು ಕುರ್ಚಿಯನ್ನು ಭದ್ರಪಡಿಸಿಕೊಂಡು ಕೂರುವವನು ನಾನಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಶಾಸಕರು ತಪ್ಪು ಮಾಡಿದರೆ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಇದರಲ್ಲಿ ಎರಡನೇ ಮಾತಿಲ್ಲ ಎಂದ ಅವರು, ಕಂಪ್ಲಿ ಗಣೇಶ್ ವಿಷಯ ಪ್ರಸ್ತಾಪಿಸಿ ಕೆಲವು ರೀತಿ ರಿವಾಜುಗಳಿರುತ್ತವೆ. ಹಾಗಾಗಿಯೇ ಕ್ರಮ ಕೈಗೊಳ್ಳಲು ತಡವಾಗಿದೆ ಎಂದರು.

Leave a Reply