ಭಾರತಕ್ಕೆ ಸ್ವತಂತ್ರ ಸಿಕ್ಕ ಹೊತ್ತಲ್ಲೇ ಮೋದಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ…!

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಶತ್ರುಗಳನ್ನು ಎದುರಿಸುವ ಗುಂಡಿಗೆ ಇಲ್ಲದೆ, ಭಯದಲ್ಲಿ ಕುತಂತ್ರಗಳನ್ನು ನಡೆಸುತ್ತ ಹೊಲಸು ರಾಜಕೀಯ ಮಾಡುತ್ತಿರುವುದು ಎದ್ದು ಕಾಣುತ್ತಿದೆ.

ಅಸಂವಿಧಾನಕವಾಗಿ, ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ರಾಜ್ಯ ಸರ್ಕಾರಕ್ಕೆ ಯಾವುದೇ ಮುಂಸೂಚನೆ ಕೊಡದೆ, ಅನುಮತಿ ಪಡೆದುಕೊಳ್ಳದೇ ಅಕ್ರಮವಾಗಿ ಸಿಬಿಐ ದಾಳಿ ನಡೆಸಿ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಮೋದಿಯ ಈ ಕಪಟತನದ ವಿರುದ್ಧ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಜನತೆ ಮಾತ್ರವಲ್ಲದೆ, ಇಡೀ ದೇಶದ ಎಲ್ಲ ನಾಯಕರು ಮೋದಿಯ ಮೋಸದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿಬಿಐನ ಹಠಾತ್ ಅಕ್ರಮ ದಾಳಿ ವಿರುದ್ಧ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದು ಕೇಂದ್ರ ಸರಕಾರದಿಂದ ನಡೆಯುತ್ತಿರುವ ಪ್ರಜಾತಂತ್ರದ ಕೊಲೆ ಎಂದು ಟೀಕಿಸಿ, ನಿನ್ನೆ ಅಹೋರಾತ್ರಿ ಧರಣಿ ಕೂತಿದ್ದಾರೆ. ಧರಣಿ ವೇಳೆ ನಿನ್ನೆ ರಾತ್ರಿಯಿಡೀ ಎಚ್ಚರವಿದ್ದ ಮಮತಾ ಬ್ಯಾನರ್ಜಿ ಅವರು ಆಹಾರವನ್ನೂ ಸೇವಿಸಲಿಲ್ಲ.
ದೇಶ ಹಾಗೂ ಸಂವಿಧಾನದ ರಕ್ಷಣೆಯಾಗುವವರೆಗೂ ತಮ್ಮ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಬಂಗಾಳ ಸಿಎಂ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಮಧ್ಯ ಪ್ರದೇಶ ಸಿಎಂ ಕಮಲನಾಥ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜಿಗ್ನೇಶ್ ಮೇವಾನಿ ಸೇರಿದಂತೆ ಹಲವರು ಮಮತಾ ಅವರ ಕೂಗಿಗೆ ಧ್ವನಿಗೂಡಿಸಿದ್ದಾರೆ.

ಘಟನೆ ಕುರಿತು ಟ್ವೀಟ್ ಮೂಲಕ ಬೆಂಬಲ ಸೂಚಿಸಿದ ದೇವೇಗೌಡ ಅವರು, “ಸಿಬಿಐನವರು ಪಶ್ಚಿಮ ಬಂಗಾಳದ ಪೊಲೀಸ್ ಕಮಿಷ್ನರ್ ನನ್ನ ಬಂಧಿಸಲು ಯತ್ನಿಸಿರುವ ಅಸಂವಿಧಾನಕ ಘಟನೆ ಬಗ್ಗೆ ಕೇಳಿ ಗಾಬರಿ ಆಯಿತು. ಇಂತಹ ಘಟನೆಗಳು ತುರ್ತು ಪರಿಸ್ಥಿತಿಯಲ್ಲಿ ಸಂಭವಿಸಿದ್ದವು.ಪಶ್ಚಿಮ ಬಂಗಾಳದ ಪರಿಸ್ಥಿತಿ ಭಾರತದ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸೋಣ” ಎಂದು ಟ್ವೀಟ್ ಮಾಡಿದ್ದಾರೆ.

ಹಾಗೆಯೆ ಸಿಎಂ ಕುಮಾರಸ್ವಾಮಿ ಅವರು ಕೂಡ ಟ್ವೀಟ್ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.

2 thoughts on “ಭಾರತಕ್ಕೆ ಸ್ವತಂತ್ರ ಸಿಕ್ಕ ಹೊತ್ತಲ್ಲೇ ಮೋದಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ…!

  1. Udayudaykumar says:

    ಮಂಡ್ಯಕ್ಕೆ ಹೊರಗಿನವರು ಬರುತ್ತಾರೆತ್ತಾನೆ ಹಾಗೆಯೇ ಮಂಡ್ಯಜನ ಹೊರಗೆ (ಊರು,ದೇಶ,ವಿದೇಶ)ಹೋದಹಾಗೆ ಮೋದಿ,ಯೋಗಿಯವರು ಪಶ್ಚಿಮ ಬಂಗಾಳಕ್ಕೆ ಯಾಕೆ ಹೋಗಬಾರದು.ಮಮತಾ ಕರ್ನಾಟಕಕ್ಕೆಬರಲಿಲ್ವ.ಬರಬೇಡ ಅನ್ನೋಕೆ ಅವಳ್ಯಾರ್?ಮಂಡ್ಯಜನರೇ ನಮ್ಮ,ನಿಮ್ಮ ಕಷ್ಟಕ್ಕೆ ಆಗ ಬರೊದು ಮೋದಿ ಅವರೆ ತಳ್ಕೂಳ್ಳಿ.60ವರ್ಷ ಕಾಂಗ್ರೆಸ್ ಆಡಳಿತ ಮಾಡಿದ್ದಾಯ್ತು,10ವರ್ಷ ಇತರರು ತಮ್ಮಸ್ವಾರ್ಥಕ್ಕೆರಾಜಕೀಯ ಮಾಡಿದ್ರು,ನಿಮಗೆ, ನಮಗೆ ನೀರಿನಸಮಸ್ಯೆ ಬಗೆಹರಿಸಿದರ ಇಲ್ಲ.ನಿಮ್ಮ ನಮ್ಮ ಒಗ್ಗಟ್ಟನ್ನ ನಮಗೆ ಬೇಕಾದವರನ್ನ ಬಳಸಿಕೊಂಡು ನಮ್ಮನ್ನು ಕಬ್ಬಿನ ಹಿಪ್ಪೆ ಮಾಡಿದ್ರೂ ಮಂಡ್ಯ ಜನತೆ ಕೆಲಸಕ್ಕೆ ಬಾರದವರನ್ನ ಕಾಲಿಡುಕ್ಕೊಳ್ಳೊದು ದುರದ್ರುಷ್ಟಕರ!

  2. ಕಳ್ಳ ರಿಗೆ ಕಳ್ಳ ರ ಬೆಂಬಲಿಗರು ಮಹಾಘಟಬಂದನ್ನಲ್ಲಿ ಇರುವ ಎಲ್ಲಾ ಪಕ್ಷಗಳು

Leave a Reply