ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಗೂಂಡಾ ಮುಖಂಡನ ಬಂಧನ…!

ಬಿಜೆಪಿ ಪಕ್ಷದವರನ್ನು ಗೂಂಡಾಗಿರಿಗೆ ಸಂಬಂಧಿಸಿದ ವಿಷಯಗಳಿಗೆ ಬಂಧಿಸುವುದು ಒಂದು ನಿಸ್ಸಂದಿಗ್ಧವಾದ ವಿಷಯ. ಗೂಂಡಾಗಳಿಂದ ಕಟ್ಟಲಾಗಿರುವ ಪಕ್ಷದ ನಾಯಕರಿಂದ ಇದಕ್ಕೂ ಮೀರಿದ ನಿರೀಕ್ಷೆ ಇಡಲು ಸಾಧ್ಯವೇ? ಖಂಡಿತ ಇಲ್ಲ.

ಈಗ ಇದೆ ರೀತಿ ಬಿಜೆಪಿ ಪಕ್ಷದ ಗೂಂಡಾ ಮುಖಂಡ ನಿಖಿಲ್ ಮುರ್ಕುಟೆಯನ್ನು ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದಕ್ಕೆ ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಮುರ್ಕುಟೆ ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದಾನೆ. ಫೆ.1 ರಂದು ಬೆಳಗಾವಿಯ ಗಾಂಧಿನಗರದಲ್ಲಿ ಬರ್ತ್ ಡೇ ಪಾರ್ಟಿ ನಡೆದಿತ್ತು. ನಿಖಿಲ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಆಗಮಿಸಿದ್ದರು.

ಬೆಳಗಾವಿ ಮಾಳಮಾರುತಿ ಪೊಲೀಸರು ತಡರಾತ್ರಿ ಕಾರ್ಯಚರಣೆ ನಡೆಸಿ ನಿಖಿಲ್ ಮುರ್ಕುಟೆನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

Leave a Reply