ಇವರು ನೀಡುವ ಹೇಳಿಕೆಗಳಿಂದ ಜನರಿಗೆ ನಾವು ಎಂಟರ್ ಟೈನ್ಮೆಂಟ್ ಐಟಂ ಆಗಿದ್ದೇವೆ – ಬಿಜೆಪಿ ಶಾಸಕ ರಾಜು ಗೌಡ

ಬಿಜೆಪಿ ನಾಯಕರು ನೀಡುವ ‘ಮೈತ್ರಿ ಸರ್ಕಾರ ಉರುಳುತ್ತೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಸಿಎಂ ಆಗುತ್ತಾರೆ.’ ಎಂಬ ಅಪಕ್ವ ಹೇಳಿಕೆಗಳಿಂದ ಜನರಿಗೆ ನಾವು ಧಾರವಾಹಿಯಲ್ಲಿ ನಟಿಸುವ ಎಂಟರ್ ಟೈನ್ಮೆಂಟ್ ಐಟಂನಂತೆ ಆಗಿದ್ದೇವೆ ಎಂದು ಹೇಳುವ ಮೂಲಕ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜು ಗೌಡ ಬಿಜೆಪಿ ನಾಯಕರನ್ನೇ ಟೀಕಿಸಿದ್ದಾರೆ.

ಸರ್ಕಾರ ಅಂದು ಬೀಳುತ್ತೆ, ಇಂದು ಬೀಳುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವುದು, ಅವರಿಗಾಗಲಿ, ನಮಗಾಗಲಿ(ಶಾಸಕರು) ಶೋಭೆ ತರುವಂತ ಕೆಲಸವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪಕ್ಷದ ನಾಯಕರು ವಿರೋಧ ಪಕ್ಷ ನಿರ್ವಹಿಸಬೇಕಾಗಿರುವ ಕರ್ತವ್ಯವನ್ನೇ ಸಂಪೂರ್ಣವಾಗಿ ಮರೆತಿದ್ದು, ಆಡಳಿತ ಪಕ್ಷದ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷಗಳನ್ನು ಒಡ್ಡಿ ತಮ್ಮ ಪಕ್ಷಕ್ಕೆ ಸೇರುವಂತೆ ಮನವೊಲಿಸುವ ಅನೈತಿಕ, ಲಜ್ಜೆಗೆಟ್ಟ ಕೆಲಸದಲ್ಲಿ ತೊಡಗಿದ್ದು, ಅದನ್ನು ಏನೋ ದೊಡ್ದು ಸಾಧನೆ ಮಾಡುತ್ತಿರುವ ರೀತಿ, ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನೋಡುತ್ತಿರುವ ಜನರಿಗೆ ಬಿಜೆಪಿ ಪಕ್ಷದ ಮೇಲೇ ಅಸಡ್ಡೆ ಮೂಡುತ್ತಿದೆ. ಅಲ್ಲದೆ ತಮ್ಮ ಪಕ್ಷದ ಶಾಸಕರಿಗೆ ನಾಯಕರ ಈ ಚೇಷ್ಟೆ ಕಂಡು ಇರಿಸು ಮುರಿಸು ಉಂಟಾಗುತ್ತಿರುವುದು ಈಗ ಕಂಡುಬಂದಿದೆ.

Leave a Reply