ಯಡಿಯೂರಪ್ಪನವರ ನಿವಾಸಕ್ಕೆ ಸಿಸಿಬಿ ನೋಟಿಸ್…! ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗಬೇಕು…!

ವಿರೋಧ ಪಕ್ಷ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತು, ಆಪರೇಷನ್ ಕಮಲಾದಲ್ಲಿ ತಲ್ಲೀನರಾಗಿರುವ ಬಿಜೆಪಿ ಮುಖಂಡ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಿಸಿಬಿ ದೊಡ್ಡ ಶಾಕ್ ನೀಡಿದೆ!

ಈಗಾಗಲೇ ‘ಸರ್ಕಾರ ದೀಪಾವಳಿಗೆ ಬೀಳುತ್ತೆ, ಸಂಕ್ರಾಂತಿಗೆ ಉರುಳುತ್ತದೆ’ ಎಂದು ಹೇಳಿ ರಾಜ್ಯದ ಜನತೆಯ ಮುಂದೆ ಅಕ್ಷರಶಃ ಜೋಕೆರ್ ಗಳಾಗಿರುವ ಬಿಜೆಪಿ ನಾಯಕರ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ.

ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರ ಪಿಎ ಸಂತೋಷ್, ಬಿಜೆಪಿ ಪಕ್ಷದ ಮತ್ತೊಬ್ಬ ನಾಯಕ ಕೆಎಸ್ ಈಶ್ವರಪ್ಪನವರ ಪಿಎ ವಿನಯ್ ಅವರ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.

ಇಸ್ಕಾನ್ ದೇವಾಲಯದ ಬಳಿ 8 ಜನರ ತಂಡವೊಂದು ವಿನಯ್‍ನನ್ನು 2017ರ ಮೇ 11 ರಂದು ಅಪಹರಣ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ವಿನಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

ಈ ಹಿಂದೆ ಜಾಮೀನು ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಮುಂದೆ ಸಂತೋಷ್ ವಿಚಾರಣೆಗೆ ಹಾಜಾರಾಗಿದ್ದ. ಆದರೆ ಇದೀಗ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ತಮ್ಮ ‘ಬಾಸ್’ ಯಡಿಯೂರಪ್ಪನವರ ಆಟ ಸಿಸಿಬಿ ಮುಂದೆ ನಡೆಯದ ಕಾರಣ ಸಂತೋಷ್‍ಗೆ ಸಂಕಷ್ಟ ಶುರುವಾಗಿದೆ.

ಸಂತೋಷ್ ವಿಚಾರಣೆಗಾಗಿ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರಂತೆ. ಸಿಸಿಬಿ ಕಳುಹಿಸಿರುವ ನೋಟಿಸ್ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ತಲುಪಿದೆ.

ಆದರೆ ಸಂತೋಷ್ ಸುಳ್ಳು ನೆಪಗಳನ್ನು ಹೇಳಿ ಸಿಸಿಬಿ ವಿಚಾರಣೆಗೆ ಹಾಜರಾಗದೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ. ‘ಯಥಾ ರಾಜ ತಥಾ ಪ್ರಜಾ’ ಎಂಬ ಗಾದೆ ಮಾತಿಗೆ ಯಡಿಯೂರಪ್ಪನವರ ಪಾಳಯ ಪ್ರತ್ಯಕ್ಷ ಉದಾಹರಣೆ.

Leave a Reply