ಸಿಎಂ ಅಪ್ಡೇಟ್ಸ್ ವಾಟ್ಸಪ್ ಗ್ರೂಪ್ ಗೆ ಕೆಲವೇ ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರ ಸೇರ್ಪಡೆ…!

ಪಾರದರ್ಶಕತೆ ಪ್ರಜಾಪ್ರಭುತ್ವದ ಒಂದು ಮೂಲ ಉದ್ದೇಶ. ನಾವು ಮತ ಚಲಾಯಿಸಿ ಅಧಿಕಾರ ವಹಿಸಿರುವ ನಮ್ಮ ಪ್ರತಿನಿಧಿಗಳು ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಹಾಗೆಯೆ, ತಾವು ಏನು ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ಹೇಳುವುದು ನಾಯಕರ ಕರ್ತವ್ಯ. ಇದಕ್ಕಾಗಿ ಒಂದು ನೂತನ ಪ್ರಯೋಗವನ್ನು ಮಾಡಲಾಗುತ್ತಿದೆ.

ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಪ್ರತಿನಿತ್ಯ ಮಾಹಿತಿ ನೀಡಲು ಹಾಗು ಸಿಎಂ ಕುಮಾರಸ್ವಾಮಿ ಅವರ ದಿನಚರಿಯನ್ನು ಜನರಿಗೆ ತಲುಪಿಸಲು ವಾಟ್ಸಪ್ ಗ್ರೂಪ್ ರಚನೆ ಮಾಡಲಾಗಿದೆ. ಜಿಲ್ಲಾವಾರು ವಿಭಾಗಗಳನ್ನು ಮಾಡಲಾಗಿದ್ದು, ಜನರು ಇದಕ್ಕೆ ಸೇರ್ಪಡೆಯಾಗಬಹುದು. ವಿಶೇಷವೇನೆಂದರೆ ಕೇವಲ ಗ್ರೂಪ್ ಬಗ್ಗೆ ಜನರಿಗೆ ಮಾಹಿತಿ ನೀಡಿದ ಕೆಲವೇ ಘಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರ ತಮ್ಮ ತಮ್ಮ ಜಿಲ್ಲೆಯ ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಈ ಕುರಿತು ರಾಜ್ಯದ ಜನತೆಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಪ್ರತಿನಿತ್ಯದ ಕಾರ್ಯಕ್ರಮಗಳ ವಿವರಗಳು ಇನ್ನು ಮುಂದೆ ನೇರವಾಗಿ ವಾಟ್ಸಪ್ ಮೂಲಕ ನಿಮಗೆ ತಲುಪಲಿದೆ ಎಂದು ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವರು ಲಿಂಕ್ ವೊಂದನ್ನು ನೀಡಿದ್ದು, ಇದನ್ನು ಕ್ಲಿಕ್ ಮಾಡಿ, ನಿಮ್ಮ ಜಿಲ್ಲೆಯ ಗ್ರೂಪ್‌ಗೆ ಜನರು ಸೇರ್ಪಡೆಯಾಗಬಹುದು. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಗ್ರೂಪ್‌ ಅನ್ನು ನಿರ್ವಹಣೆ ಮಾಡಲಾಗುತ್ತದೆ.

ಯುವ ಜನರನ್ನು ತಲುಪಲು ಈಗ ವಾಟ್ಸಪ್ ಪ್ರಬಲ ಅಸ್ತ್ರವಾಗಿದೆ. ಮುಂದಿನ ದಿನಗಳಲ್ಲಿ ಜನರ ಜೊತೆ ನೇರವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗಿದ್ದು, ಜಿಲ್ಲಾವಾರು ವಿಭಾಗಗಳನ್ನು ಮಾಡಲಾಗಿದೆ.

Read more at: https://kannada.oneindia.com/news/karnataka/now-get-karnataka-government-updates-in-whatsapp-159754.html

Read more at: https://kannada.oneindia.com/news/karnataka/now-get-karnataka-government-updates-in-whatsapp-159754.html

One thought on “ಸಿಎಂ ಅಪ್ಡೇಟ್ಸ್ ವಾಟ್ಸಪ್ ಗ್ರೂಪ್ ಗೆ ಕೆಲವೇ ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರ ಸೇರ್ಪಡೆ…!

  1. ಕಲ್ಯಾಣ says:

    Its not working now
    How to open it now….?????..

Leave a Reply