ಹೆಚ್ಡಿಕೆ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು…?

ರೈತಪರ ನಾಯಕ ಎಂದೇ ಖ್ಯಾತಿ ಪಡೆದಿರುವ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರು ಸದನವನ್ನು ಧಿಕ್ಕರಿಸಿ ಹೊರನಡೆದಿದರೂ, ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ? ‘ ಎಂಬಂತೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉತ್ತಮವಾದ ರೈತಪರ ಹಾಗು ಬಡವರ ಪರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ರೈತರಿಗೆ ಸಿಕ್ಕೇದ್ದೇನು? ಮುಂದೆ ಓದಿ…

1. ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472 ಕೋಟಿ ಅನುದಾನ.

 • ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ಪ್ರೋತ್ಸಾಹಧನ- 368 ಕೋಟಿ ರೂ. ಅನುದಾನ.
 • ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನ-100 ಕೋಟಿ ರೂ.
 • ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ- 10 ಕೋಟಿ ರೂ.
 • ಕರಾವಳಿ ಹಾಗೂ ಮಲೆನಾಡು ಜನರಿಗೆ ಭತ್ತ ಬೆಳೆಯಲು ಉತ್ತೇಜಿಸಲು ‘ಕರಾವಳಿ ಪ್ಯಾಕೇಜ್’ – 5 ಕೋಟಿ ರೂ.ಗಳ ಅನುದಾನ.
 • ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್​ಗೆ 7,500 ರೂ. ನೇರ ವರ್ಗಾವಣೆ.
 • ರೈತರ ಸಾಲಮನ್ನಾಗೆ ₹46 ಸಾವಿರ ಕೋಟಿ
 • ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಮಾರಾಟ ಮಾಡಲು ವ್ಯವಸ್ಥೆ
 • 600 ಸಂತೆಗಳನ್ನು ತಲಾ 1ಕೋಟಿ ವೆಚ್ಚದಲ್ಲಿ ಸ್ಥಾಪಿಸುವುದು\
 • ರೈತರ ಬೆಳೆಗೆ ಸಾವಿರ ಕೋಟಿ ಬೆಂಬಲ ಬೆಲೆ ಘೋಷಣೆ
 • ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ
 • ಕಬ್ಬು ಬೆಳೆಗಾರರ ಬಾಕಿ ಕೊಡಿಸಲು ಹೊಸ ಕಾಯ್ದೆ
 • ಶೂನ್ಯ ಬಂಡವಾಳ ಸಂಬಂಧಿಸಿದ ಕೃಷಿಗೆ ಆದ್ಯತೆ
 • ಕಡಿಮೆ ವೆಚ್ಚ-ಹೆಚ್ಚು ಉತ್ಪಾದನೆಯ ಗುಂಪು ಕೃಷಿ ಯೋಜನೆ
 • ಮಹಿಳಾ ರೈತರಿಗೆ ವಿಶೇಷ ಕೃಷಿ ಪ್ಯಾಕೇಜ್
 • ಫಸಲ್ ಭೀಮಾ ಯೋಜನೆಗೆ ಪರ್ಯಾಯ ಸ್ಕೀಂ
 • ರಾಜ್ಯಸರ್ಕಾರ ಪ್ರಾಯೋಜಿತ ಬೆಳೆ ವಿಮೆ ಯೋಜನೆ
 • ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನ ಜಾರಿ
 • ಎಲ್ಲ ನಗರಗಳಲ್ಲಿ ಬಡವರ ಬಂಧು ಕಾರ್ಯಕ್ರಮ ವಿಸ್ತರಣೆ
 • ರೈತ ಸಿರಿ ಯೋಜನೆಯಡಿ ರೈತರ ಖಾತೆಗೆ ನೇರ 10 ಸಾವಿರ ರೂ. ವರ್ಗಾವಣೆ.

ತೋಟಗಾರಿಕೆ:
1. ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್.
2. ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ. ಅನುದಾನ.

ರೇಷ್ಮೆ :
1. ಕಚ್ಚಾ ರೇಷ್ಮೆ ದರದಲ್ಲಿ ಸ್ಥಿರತೆ ಕಾಪಾಡಲು ಮಾರುಕಟ್ಟೆ ಮಧ್ಯ ಪ್ರವೇಶಕ್ಕಾಗಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ. ಅನುದಾನ.

Leave a Reply