ಹಾಸ್ಯ ಬ್ರಹ್ಮ ನರಸಿಂಹರಾಜು ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಮಂಜೂರು ಮಾಡಿದ ಕುಮಾರಸ್ವಾಮಿ…!

ತಮ್ಮ ಜೀವನದಲ್ಲಿ ಎಷ್ಟೇ ನೋವ್ವುಗಳನ್ನು ಅನುಭವಿಸುತ್ತಿದ್ದರು, ಪ್ರೇಕ್ಷಕರನ್ನು ತಮ್ಮ ವಿಭಿನ್ನ ಹಾಸ್ಯ ಪಾತ್ರಗಳಿಂದ ಕಚುಗುಳಿ ಇಡುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರು ನಮನ್ನು ಅಗಲಿ ಹಲವು ವರುಷಗಳೇ ಆಗಿದ್ದರು, ಅವರ ಹಾಸ್ಯ ಚಟಾಕಿಗಳು ಇಂದಿಗೂ ನಮನ್ನು ನಗಿಸುತ್ತದೆ.

ತಮ್ಮ ಮೇರು ನಟನೆಯಿಂದ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಕನ್ನಡದ ಹೆಮ್ಮೆ, ನರಸಿಂಹ ರಾಜು ಅವರಿಗೆ ಗೌರವ ಸೂಚಿಸಲು, ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡಿಸಿದ ಜನಮನ ಗೆದ್ದಿರುವ ಬಜೆಟ್ ನಲ್ಲಿ ಅವರ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ರೂಪಾಯಯನ್ನು ಅನುಧಾನ ಮಾಡಿದ್ದಾರೆ.

ಇಂತಹ ಶ್ರೇಷ್ಠ ನಟರ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವ ಸೂಚಿಸಿದ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ಜನರು ಆಬಾರಿಯಾಗಿದ್ದಾರೆ.

Leave a Reply