ಹಿಂದುಗಳಗೆ ಹೆಚ್ಡಿಕೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ…!

‘ನಾಯಿ ಬೊಗಳಿದರೆ ದೇವಲೋಕ ಹಳದೀತೇ?’ ಎಂಬಂತೆ ಬಿಜೆಪಿ ಶಾಸಕರು ಸದನವನ್ನು ದಿಕ್ಕರಿಸಿ ಹೊರನಡೆದರೂ, ಜನಮನ ಗೆದ್ದು ಎಲ್ಲಾ ವರ್ಗದವರು ‘ವ್ಹಾ…ವ್ಹಾ..’ ಎಂದು ಕೊಂಡಾಡುವಂತಹ ಪರಿಪೂರ್ಣ ಬಜೆಟ್ ಅನ್ನು ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಂಡಿಸಿದ್ದಾರೆ.

ಈ ಬಜೆಟ್ ನಲ್ಲಿ ಕುಮಾರಸ್ವಾಮಿ ಅವರು ಒಂದು ರಾಜ್ಯದ ಜನತೆ ನೆಮ್ಮದಿಯಾಗಿ ಜೀವನ ನಡೆಸಲು ಏನೇನು ಸೌಕರ್ಯಗಳು ಬೇಕೋ, ಅವೆಲ್ಲದಕ್ಕೂ ಆದ್ಯತೆ ನೀಡಿ ಸಮಗ್ರವಾದ ಬಜೆಟ್ ಮಂಡಿಸಿದ್ದಾರೆ. ಅಂದರೆ ಕೃಷಿ, ಅರೋಗ್ಯ, ನೀರಾವರಿ, ಶಿಕ್ಷಣವನ್ನು ಕೇಂದ್ರೀಕರಿಸಿ ಕುಮಾರಸ್ವಾಮಿ ಅವರು ಲೆಕ್ಕಚಾರಿ ಹಾಕಿರುವುದರಿಂದ ರಾಜ್ಯದ ಜನರು ದಿಲ್ ಕುಶ್ ಆಗಿದ್ದರೆ.

ಸಾಮಾನ್ಯವಾಗಿ ಎಲ್ಲ ಧರ್ಮದ ಜನರನ್ನು ತೃಪ್ತಿಪಡಿಸಲು ಯಾವ ಮುಖ್ಯಮಂತ್ರಿಯಿಂದಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಿದರೆ, ಬೇರೆ ವರ್ಗದ ಜನರು ‘ಯಾಕೆ ನಮ್ಮಲ್ಲಿ ಬಡವರು ಸರ್ಕಾರದ ಕಣ್ಣಿಗೆ ಕಾಣುವುದಿಲ್ಲವೇ’ ಎಂದು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಕುಮಾರಸ್ವಾಮಿ ಅವರು ತಮ್ಮ ಚಾಣಾಕ್ಷತನದಿಂದ ಪ್ರತಿ ಧರ್ಮದ ಜನಸಂಖ್ಯೆಗೆ ತಕ್ಕಂತೆ ಬಜೆಟ್ ನಲ್ಲಿ ಅವರ ಅಭಿವೃದ್ಧಿಗೆ ಹಣ ಮಂಜೂರು ಮಾಡಿದ್ದಾರೆ.

ಹಿಂದಿನ ಸರ್ಕಾರಗಳು ಅಲ್ಪಸಂಖ್ಯಾತರ ಗಮನ ಸೆಳೆದು ಮತ ಗಿಟ್ಟಿಸಿಕೊಳ್ಳಲು ಕೇವಲ ಅವರಿಗೆ ಆದ್ಯತೆ ನೀಡಿ ಹಿಂದುಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ ಕುಮಾರಸ್ವಾಮಿ ಅವರು ಎಲ್ಲ ಧರಮಕ್ಕೂ, ಆ ಧರ್ಮದವರ ಜನಸಂಖ್ಯೆಗೆ ಹಾಗೂ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತವಾಗಿ ಹಣ ಮಂಜೂರು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮುಸಲ್ಮಾನರ ಅಭಿವೃದ್ಧಿಗೆ ಹಾಗೂ ಕ್ರಿಸ್ಟಿಯನ್ ರ ಅಭಿವೃದ್ಧಿಗೆ ತಲಾ 200 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಹೊಸ ದೇವಸ್ಥಾನಗಳ ನಿರ್ಮಾಣ, ಹಲವು ಪುರಾತನ ದೇವಾಲಯಗಳ ದುರಸ್ತಿ ಕಾಮಗಾರಿಗೆ, ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ಅಭಿವೃದ್ಧಿ, ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರ ಹುಟ್ಟೂರು ಅಭಿವೃದ್ಧಿ ಹೇಗೆ ಹಲವಾರು ಯೋಜನಗಳೊಂದಿಗೆ ಹಿಂದೂಗಳ ಅಭಿವೃದ್ಧಿಗೆ 1000 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಹಿಂದಿನ ಯಾವುದೇ ಬಜೆಟ್ ನಲ್ಲಿ ಹಿಂದೂಗಳಿಗೆ ಆದ್ಯತೆ ನೀಡದೆ ಇದ್ದ ಕಾರಣ, ಈ ಬಜೆಟ್ ಹಿಂದುಗಳಿಗೆ ಭರ್ಜರಿ ಕೊಡುಗೆ ನೀಡಿದಂತಿದೆ.

Leave a Reply