ಒಂದು ನಾನು ರಾಜಕೀಯದಲ್ಲಿ ಇರಬೇಕು ಇಲ್ಲ ಯಡಿಯೂರಪ್ಪ ಇರಬೇಕು – ಸ್ಪೀಕರ್ ರಮೇಶ್ ಕುಮಾರ್

ತಮ್ಮ ಯೋಗ್ಯತೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹಣ ಹಾಗೂ ಅಧಿಕಾರದ ಆಮಿಷ ಒಡ್ಡಿ ತಮ್ಮ ಪಕ್ಷಕ್ಕೆ ಸೇರುವಂತೆ ಮನವೊಲಿಸಲು ಪ್ರಯತ್ನಿಸಿತ್ತಿರುವ ಬಗ್ಗೆ ಇಷ್ಟು ದಿನ ನಿರಾಕರಿಸುತ್ತಿದ್ದ ಯಡಿಯೂರಪ್ಪನವರೇ ಖುದ್ದು ‘ಆಪರೇಷನ್ ಕಮಲಾ’ದಲ್ಲಿ ಭಾಗಿಯಾಗಿರುವ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ, ಯಡಿಯೂರಪ್ಪ ಶರಣಗೌಡ ಅವರಿಗೆ ಹಣ ಹಾಗು ಅಧಿಕಾರದ ಆಮಿಷ ಒಡ್ಡಿ ಮನವೊಲಿಸಲು ಪ್ರಯತ್ನಿಸುತ್ತಿರುವ ಧ್ವನಿಸುರಳಿ ಮೂಲಕ ಬಹಿರಂಗವಾಗಿ ಸಿಕ್ಕಿಬಿದಿದ್ದಾರೆ.

ಮೊದಲು ಈ ಆರೋಪವನ್ನು ಒಪ್ಪದೇ, ಇದನ್ನು ಸಾಬೀತಿಸಿದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೊಡ್ಡಿದ್ದರು. ಆದರೆ ನೆನ್ನೆ ಆ ಧ್ವನಿ ಅವರದ್ದೇ ಎಂದು ತಮ್ಮ ಕುತಂತ್ರದ ಬಗ್ಗೆ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.

ಈ ವಿಷಯವಾಗಿ ಇಂದು ಸದನದಲ್ಲಿ ಚರ್ಚೆಯಾಗುತ್ತಿದ್ದು, ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಇಂದು ನಿರ್ಣಯವಾಗುತ್ತದೆ. ಶರಣಗೌಡರನ್ನು ಮನವೊಲಿಸುವಾಗ ಯಡಿಯೂರಪ್ಪನವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ’50 ಕೋಟಿ ಕೊಟ್ಟು ಬುಕ್ ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ. ಈ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರು ‘ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಒಂದು ನಾನು ರಾಜಕೀಯದಲ್ಲಿ ಇರಬೇಕು. ಅಥವಾ ಅವರು ಇರಬೇಕು’ ಎಂದು ಹೇಳಿದ್ದಾರೆ.

5 thoughts on “ಒಂದು ನಾನು ರಾಜಕೀಯದಲ್ಲಿ ಇರಬೇಕು ಇಲ್ಲ ಯಡಿಯೂರಪ್ಪ ಇರಬೇಕು – ಸ್ಪೀಕರ್ ರಮೇಶ್ ಕುಮಾರ್

  1. Anand Prajju says:

    Modhllu ee yadiyurappa thoalagbeku. Aglle BJP oodharavagodhu

  2. Navella toligida mele BSY & karnatakada janarige Olledu aaaguvadu

  3. Narayana Babu says:

    Because of dirty politics no one int world is perfect doing their jobs in politics every body r gross they want to mint money for generation s do nothing for public. Looting money of public in dare conciquence. What Mr modi alone will do looking this type of ministers.spoiling the name of modi ji.wake up &Correct ur mistakes do the good for the public we have voted for kind &good things.😀

  4. Pls give resignation mr.yedurappa other wise ur not able to living in humanbeing

Leave a Reply