ನಮ್ಮಿಂದ ತಪ್ಪಾಗಿದೆ..ದಯವಿಟ್ಟು ಬಿಟ್ಟುಬಿಡಿ – ಬಿಜೆಪಿ ಶಾಸಕ ಮಧುಸ್ವಾಮಿ …!

ಒಂದು ರಾಷ್ಟೀಯ ಪಕ್ಷದ ಮಾನ ಮರ್ಯಾದಿಯನ್ನು ತನ್ನ ಅಧಿಕಾರದ ದಾಹದಿಂದ ಹರಾಜು ಹಾಕಿರುವ ಬಿ.ಎಸ್ ಯಡಿಯೂರಪ್ಪನವರ ಭ್ರಷ್ಟಾಚಾರದ ಪ್ರಕರಣದ ಬಗ್ಗೆ ಇಂದೂ ಕೂಡ ವಿಧಾಸಭಾ ಕಲಾಪದಲ್ಲಿ ಸದ್ದು ಮಾಡಿತು. ಮೊದಲು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ್ದ ಧ್ವನಿ ಸುರಳಿ ಸಂಪೂರ್ಣ ನಕಲಿ, ಅದು ಸತ್ಯವೇ ಆದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿದ್ದ ಯಡಿಯೂರಪ್ಪ, ನಂತರ ಆ ಧ್ವನಿ ಸುರಳಿಯಲ್ಲಿ ಇರುವುದು ಅವರದ್ದೇ ಧ್ವನಿ ಎಂದು ಒಪ್ಪಿಕೊಂಡರು.

ಈ ಧ್ವನಿ ಸುರಳಿಯಲ್ಲಿ ಯಡಿಯೂರಪ್ಪನವರು ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂಪಾಯಿ ದುಡ್ಡು ಕೊಟ್ಟು ‘ಬುಕ್’ ಮಾಡಿರುವುದಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಹಾಗು ಅಮಿತ್ ಶಾ ಸುಪ್ರೀಂ ಕೋರ್ಟ್ ಹಾಗು ಹೈ ಕೋರ್ಟ್ ನ್ಯಾಯಾಧೀಶರನ್ನು ‘ಸೆಟ್’ ಮಾಡಿದ್ದಾರೆ ಎಂದು ಹೇಳಿರುವುದು ರಾಷ್ಟ್ರ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣವನ್ನು ನೆನ್ನೆ ಸದನದಲ್ಲಿ ವಿಶೇಷ ತನಿಖಾ ತಂಡಕ್ಕೆ(ಎಸ್‍ಐಟಿ) ಮುಂದಿನ ತನಿಖೆಗಾಗಿ ಒಪ್ಪಿಸಬೇಕು ಎಂದು ನಿರ್ಧಾರವಾಗಿತ್ತು. ಆದರೆ ಇನ್ನು ಸದನದಲ್ಲಿ ಬಿಜೆಪಿ ಶಾಸಕ ಮಧುಸ್ವಾಮಿ ‘ನಮ್ಮಿಂದ ತಪ್ಪು ಆಗಿರುವುದು ನಿಜ್ಜ, ಆದರೆ ಪ್ಲೀಸ್ ಇದನ್ನು ಇಲ್ಲಿಗೆ ಬಿಟ್ಟು ಬಿಡಿ, ಎಸ್ಐಟಿಗೆ ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಪ್ಪಿಸಬೇಡಿ, ನಮನ್ನು ಕ್ಷಮಿಸಿ ಬಿಡಿ’ ಎಂದು ಗೋಗರೆದು ವಿಧಾನಸಭಾ ಕಲಾಪದಲ್ಲಿ ಪದೇ ಪದೇ ತಪ್ಪಾಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಸೋಮವಾರದ ಕಲಾಪದಲ್ಲಿ ಭಾರೀ ಚರ್ಚೆಯ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದರು.

Leave a Reply