ಮೋದಿ ಕಾರ್ಯಕ್ರಮದಲ್ಲಿ ಸಚಿವೆಯ ಸೊಂಟ ಸವರಿದ ಬಿಜೆಪಿ ಮಂತ್ರಿ…!

ಕಾಮುಕರ ಪಕ್ಷ ಎಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಪಕ್ಷ ತಮ್ಮ ಈ ಹೆಸರನ್ನು ಉಳಿಸಿಕೊಳ್ಳಲು ಪಕ್ಷದ ನಾಯಕರು ಹರಸಾಹಸ ಮಾಡುತ್ತಿದ್ದಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9ರಂದು ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ
ಬಿಜೆಪಿ ಸಚಿವ ಮನೋಜ್ ಕಾಂತಿ ಡೆಬ್ ವೇದಿಕೆ ಮೇಲೆಯೇ ಬುಡಕಟ್ಟು ಜನಾಂಗಕ್ಕೆ ಸೇರಿರುವ ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ಶಿಕ್ಷಣ ಸಚಿವೆ ಶಾಂತನಾ ಚಕ್ಮಾ ಸೊಂಟ ಸವರಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮಹಿಳಾ ಸಚಿವೆ ಮನೋಜ್ ಕಾಂತಿ ಡೆಬ್ ಅವರಿಂದ ತಪ್ಪಿಸಿಕೊಂಡಿದ್ದಾರೆ.

ವೇದಿಕೆಯ ಮೇಲೆ ಸಚಿವರು ಸೊಂಟ ಹಿಡಿಯುತ್ತಿರುವ ದೃಶ್ಯವು ಸ್ಥಳೀಯ ಮಾಧ್ಯಮ ಹಾಗೂ ಕಾರ್ಯಕ್ರದಲ್ಲಿ ಸೇರಿದ್ದ ಜನರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಚಿವರ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ‘ಭೇಟಿ ಬಚಾವೋ ಭೇಟಿ ಪಡಾವೋ’ ಎಂದು ವೇದಾಂತ ಸಾರುವ ಪಕ್ಷದಲ್ಲೇ ಹೆಂಗಸರು ಈ ದುಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಮಹಿಳೆಯನ್ನು ಅವಮಾನಿಸಿದ ಹಾಗೂ ಅಸಭ್ಯವಾಗಿ ಸ್ಪರ್ಶ ಮಾಡಿದ ಸಚಿವರನ್ನು ಬಂಧಿಸಬೇಕು ಎಂದು ರಾಜ್ಯದ ಜನರು ಒತ್ತಾಯಿಸಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ 11 ತಿಂಗಳು ಕಳೆದಿದೆ. ಇಷ್ಟು ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಚಿವರಿಗೆ ಶಿಕ್ಷಯಾಗಲೇಬೇಕು ಎಂದು ಬಿಜಾನ್ ಧಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಸಚಿವ ವಿರುದ್ಧ ವಿವಿಧ ಪಕ್ಷಗಳು ಹಾಗೂ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

Leave a Reply