ವೈಧ್ಯರ ನಿರ್ಲಕ್ಷ್ಯದಿಂದ ಜಗತ್ತನ್ನೇ ನೋಡುವ ಮುನ್ನ ಕೊನೆಯುಸಿರೆಳೆದ ಕಂದಮ್ಮ…!

ವೈದ್ಯರ ಬೇಜವಾಬ್ದಾರಿಯಿಂದ ಇನ್ನು ಕಣ್ಬಿಡದ ಕೂಸು ಮಹಿಳೆಯ ಗರ್ಭದಲ್ಲೇ ಸಾವನ್ನಪ್ಪಿದೆ. ತನನ್ನೇ ನಂಬಿಕೊಂಡು ಬಂದ ಗರ್ಭವತಿಯನ್ನು ನಿರ್ಲಕ್ಷಸಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಕಾರಣ ಗರ್ಭದಲ್ಲೇ ಜಗತ್ತನ್ನು ನೋಡುವ ಮುನ್ನವೇ ಆ ಗಂಡು ಮಗು ಕೊನೆಯುಸಿರೆಳೆದಿದೆ. ಈ ದಾರುಣ ಘಟನೆಯು ಕೆಜೆಎಫ್ ನ ಸರ್ಕಾರೀ ಆಸ್ಪತ್ರೆಯಲ್ಲಿ ನಡೆದಿದೆ.

ಕೇತಗಾನಹಳ್ಳಿಯ ಸುಮಲತಾ ಎಂಬ ಮಹಿಳೆಯ ಮಗು ಸಾವನ್ನಪ್ಪಿದೆ. ಇಂದು ಬೆಳಗ್ಗೆ 6:30 ಗಂಟೆಗೆ ಹೆರಿಗೆಗೆಂದು ಜಿಲ್ಲೆಯ ಕೆಜಿಎಫ್ ಆಸ್ಪತ್ರೆಗೆ ಸುಮಲತಾ ದಾಖಲಾಗಿದ್ದರು. ಆದರೆ ಸೂಕ್ತ ಸಮಯದಲ್ಲಿ ಅವರಿಗೆ ಚಿಕಿತ್ಸೆ ದೊರೆಯದ ಪರಿಣಾಮ ಗರ್ಭದಲ್ಲಿಯೇ ಮಗು ಮೃತಪಟ್ಟಿದೆ.

ಸರಿಯಾದ ಸಮಯಕ್ಕೆ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡದಿದ್ದಕ್ಕೆ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೀವ ಉಳಿಸಬೇಕಾದ ವೈದ್ಯರೇ ಈ ರೀತಿ ಬೇಜವಾಬ್ದಾರಿ ತೋರಿದರೆ ಹೇಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಕುರಿತು ರಾಬರ್ಟ್ ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ಅಮಾನವೀಯ ಘಟನೆಗಳು ಸರ್ಕಾರೀ ಆಸ್ಪತ್ರೆಗಳಲ್ಲಿ ಇದೇನು ಮೊದಲಲ್ಲ. ಸರ್ಕಾರೀ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಹಲವಾರು ಅಮಾಯಕ ಜೀವಗಳು ಕಳೆದುಹೋಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಸರಿಯಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

Leave a Reply