ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಕರ್ನಾಟಕದ ಯೋಧನ ಪತ್ನಿಗೆ ಸರ್ಕಾರಿ ನೌಕರಿ ಘೋಷಿಸಿದ ಸಿಎಂ…!

ನೆನ್ನೆ ಪುಲ್ವಾಮದಲ್ಲಿ ನಡೆದ ಅಮಾನವೀಯ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ
44  ವೀರ ಯೋಧರ ಪೈಕಿ ಕರ್ನಾಟಕ ಮೂಲದ ಮಂಡ್ಯ ಜಿಲ್ಲೆಯ ಹೆಚ್ ಗುರು ಅವರು ಕೂಡ ಒಬ್ಬರು.

ದೇಶಕ್ಕಾಗಿ ಪ್ರಾಣ ತ್ಯಜಿಸಿದ ಈ ವೀರ ಯೋಧನ ಕುಟುಂಬಕ್ಕೆ ರಾಜ್ಯದ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಾಂತ್ವನ ಹೇಳಿ, ಗುರು ಅವರ ಪತ್ನಿಗೆ ಸರ್ಕಾರೀ ನೌಕರಿ ನೀಡುವುದಾಗಿ ಘೋಷಿಸಿದ್ದಾರೆ.

ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಗುರು ಅವರು ಸಿಆರ್ ಪಿಎಫ್ ನಲ್ಲಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಕಳೆದ 6 ತಿಂಗಳ ಹಿಂದೆ ವಿವಾಹವಾಗಿದ್ದ ಯೋಧ ಗುರು, ರಜೆಗಾಗಿ ಕಳೆದ ವಾರ ಊರಿಗೆ ಬಂದಿದ್ದರು. ರಜೆ ಮುಗಿಸಿಕೊಂಡು ವಾಪಸ್ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬೆನ್ನಲ್ಲೇ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ. 

Leave a Reply