ಬಿಜೆಪಿ ಶಾಸಕನ 2ನೇ ಪತ್ನಿಗೆ ನಡುರಸ್ತೆಯಲ್ಲಿ ಗೂಸಾ ಕೊಟ್ಟ ಮೊದಲನೇ ಪತ್ನಿ…!

‘ಕಾಮುಕ ಪಕ್ಷ’ ಎಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಪಕ್ಷದ ಈ ಬಿರುದನ್ನು ಉಳಿಸಿಕೊಳ್ಳಲು ಬಿಜೆಪಿ ಶಾಸಕರು ಹರಸಾಹಸ ಪಡುತ್ತಿರುವಂತಿದೆ. ನೀವು ಗಮನಿಸಿರುವ ಹಾಗೆ ಎರಡು ದಿನಕ್ಕೆ ಒಮ್ಮೆಯಾದರೂ ‘ ಬಿಜೆಪಿ ಶಾಸಕನಿಂದ ಲೈಂಗಿಕ ಕಿರುಕುಳ’, ಬಿಜೆಪಿ ಶಾಸಕನ ಅನೈತಿಕ ಸಂಬಂಧ’ ಎಂಬ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಾ. ಹಾಗೆಯೆ ಅಕಟಕಟಾ ಇದೆಂತಾ ದುಷ್ಟರ ಪಕ್ಷಕ್ಕೆ ನಾನು ಮತ ಹಾಕಿದೆನಲ್ಲ ಎಂದು ವಿಷಾದಕ್ಕೆ ಒಳಗಾಗುತ್ತಿರುತ್ತೀರಾ. ಈಗ ಇಂತದ್ದೇ ಮತ್ತೊಂದು ಘಟನೆ ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಶಾಸಕ ಮತ್ತು ಅವನ ‘2ನೇ ಪತ್ನಿ’ಯನ್ನು ನಡು ರಸ್ತೆಯಲ್ಲೇ ಮೊದಲ ಪತ್ನಿ, ಅವರ ತಾಯಿ ಮತ್ತು ಗುಂಪೊಂದು ಥಳಿಸಿದ ಘಟನೆ ನಡೆದಿದೆ. ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ಎರಡನೇ ಪತ್ನಿ ಪ್ರಿಯಾ ಶಿಂಧೆ ಜತೆ ಶಾಸಕ ರಾಜು ನಾರಾಯಣ ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ ಮೊದಲ ಪತ್ನಿ ಅರ್ಚನಾ, ತಾಯಿ ಮತ್ತು ಗುಂಪಿನೊಂದಿಗೆ ಆಗಮಿಸಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಲ್ಲದೆ, ಚಪ್ಪಲಿಯಲ್ಲಿ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿದ್ದಾರೆ. 

ಮಹಾರಾಷ್ಟ್ರದ ಯವತ್‌ಮಾಲ್‌ ಜಿಲ್ಲೆಯ ಬಿಜೆಪಿ ಶಾಸಕ ರಾಜು ನಾರಾಯಣ ತಡ್‌ಸಮ್‌ ತಮ್ಮ ಎರಡನೇ ಪತ್ನಿಯ ಜತೆ ಮಂಗಳವಾರ ಕ್ರೀಡಾ ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮರಳುತ್ತಿದ್ದ ವೇಳೆ 42ನೇ ವರ್ಷದ ಜನ್ಮ ದಿನವನ್ನುಆಚರಿಸುತ್ತಿದ್ದರು ಎನ್ನಲಾಗಿದೆ. 

ಈ ವೇಳೆ ಸ್ಥಳಕ್ಕೆ ಆಗಮಿಸಿದ ರಾಜು ನಾರಾಯಣ ಅವರ ತಾಯಿ ಮತ್ತು ಮೊದಲ ಪತ್ನಿ ಶಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ. 42ನೇ ಹುಟ್ಟುಹಬ್ಬದ ಖುಷಿಯಲ್ಲಿ ತನ್ನ ಎರಡನೇ ಪತ್ನಿಯ ಜತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದನು.

ಒಟ್ಟಿನಲ್ಲಿ ‘ಭೇಟಿ ಬಚಾವೋ’ ಎಂಬ ಮೌಲ್ಯ ಸಾರುವ ಪಕ್ಷದ ಯಾವ ಹೆಂಗಸರಿಗೂ ಅಥವಾ ಪಕ್ಷಕ್ಕೆ ಸಂಬಂಧ ಪಟ್ಟವಾರ ಮನೆ ಹೆಂಗಸಿರಿಗು ರಕ್ಷಣೆ ಅಥವಾ ನ್ಯಾಯ ಸಿಗುತ್ತಿಲ್ಲ.Leave a Reply