ಚುನಾವಣೆ ಗೆಲ್ಲಲು ಅಂಬಿ ಹೆಸರು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ: ಸುಮಲತಾ ವಿರುದ್ಧ ಅಂಬಿ ಅಭಿಮಾನಿಗಳು ಗರಂ..!

ರೆಬೆಲ್ ಸ್ಟಾರ್ ದಿ. ಡಾ. ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಆದರೆ ಸುಮಲತಾ ಅವರು ಅಂಬರೀಷ್ ಅವರ ಹೆಸರನ್ನು ಚುನಾವಣೆ ಗೆಲ್ಲಲು ದುರುಪಯೋಗ ಪಡೆಸಿಕೊಳ್ಳುತ್ತಿದ್ದರೆ ಎಂದು ಅವರ ವಿರುದ್ಧ ಅಂಬಿ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಅಂಬರೀಷ್ ಅವರ ಸಾವನ್ನು ಒಂದು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡು ಭಾವನಾತ್ಮಕವಾಗಿ ಮತ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಗರಂ ಆಗಿದ್ದರೆ.

ಅಂಬರೀಷ್ ಅವರ ನಿಧನದಿಂದ ಸುಮಲತಾ ಅವರಿಗೆ ನಿಜವಾಗಲೂ ಬೇಸರ ಉಂಟಾಗಿದ್ದರೆ, ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಕೂಡ ಮಾಡುತ್ತಿರಲಿಲ್ಲ. ಮಾತಿಗೆ ಮುಂಚೆ ಮಂಡ್ಯ ಜನರ ಋಣ ತೀರಿಸಲು ನಾನು ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ ಎಂದು ಹೇಳುತ್ತಿರುವ ಇವರು, ಮಂಡ್ಯ ಜನತೆಯ ಋಣ ತೀರಿಸಲು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರುವುದೊಂದೇ ಮಾರ್ಗ ಎಂದು ಯಾರು ಹೇಳಿದ್ದಾರೆ? ಮಂಡ್ಯ ಜನರ ಋಣ ತೀರಿಸಲು ಹಲವಾರು ಮಾರ್ಗಗಳಿವೆ, ಇದೊಂದೇ ಅಲ್ಲ.

ಮಂಡ್ಯ ಜನರು ಹೇಗೆ ಅಪಾರ ಪ್ರೀತಿ ಅಭಿಮಾನ ತೋರುತ್ತಾರೋ,ಅದೇ ರೀತಿ ತರ್ಕ ಬದ್ದವಾಗಿ ಯೋಚಿಸಿ ಮತ ಚಲಾಯಿಸುತ್ತಾರೆ. ಕೇವಲ ಭಾವನಾತ್ಮಕವಾಗಿ ಯೋಚಿಸಿ ಮೂರ್ಖರಾಗುವುದಿಲ್ಲ ಎಂದು ಸುಮಲತಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

Leave a Reply