ಪಾಕಿಸ್ತಾನವನ್ನು ಯಾಕೆ ಸುಮ್ಮನೆ ಬಿಡುತ್ತಿದ್ದಾರೋ ಗೊತ್ತಿಲ್ಲ : ಕೇಂದ್ರ ಸರ್ಕಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಹುತಾತ್ಮ ಗುರು ಪತ್ನಿ…!

ಸೈನಿಕರು ತಮ್ಮ ಪ್ರಾಣ ಒತ್ತೆಯಿಟ್ಟು ದೇಶಕ್ಕೆ ಸೇವೆ ಸಲ್ಲಿಸುತ್ತಾರೆ. ಅಂತಹ ಸೈನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಭದ್ರತೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಪತ್ನಿ ಕಲಾವತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡಕ್ಕೆ ಭೇಟಿ ನೀಡಿದ ಹುತಾತ್ಮ ಗುರು ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಿದ್ದರು.

ನಂತರ ಮಾತನಾಡಿದ ಕಲಾವತಿ ಅವರು ಇಷ್ಟೆಲ್ಲ ಭಾರತೀಯ ಸೈನಿಕರನ್ನು ಸಾಯಿಸಿದ್ರೂ, ಕೇಂದ್ರ ಸರ್ಕಾರ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದೆ ಪಾಕಿಸ್ತಾನವನ್ನು ಸುಮ್ಮನೆ ಯಾಕೆ ಬಿಡ್ತಾ ಇದ್ದಾರೆ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಇಷ್ಟು ಜನ ಸೈನಿಕರನ್ನು ನಾವು ಕಳೆದುಕೊಳ್ಳುತ್ತಲೇ ಇದ್ದೇವೆ ಎಂದು ದುಃಖ ತೊಡಿಕೊಂಡರು. ಪಾಕ್‍ನಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಸ್ಥಿತಿ ಇಲ್ಲ, ಪಾಕ್ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಬೇಕು ಎಂದು ಕಲಾವತಿ ಆಗ್ರಹಿಸಿದ್ದಾರೆ.

ನಮ್ಮ ಎಷ್ಟು ಜನ ಸೈನಿಕರನ್ನು ಅವರು ಸಾಯಿಸಿದ್ದಾರೆಯೋ ಅದರ ಎರಡು ಪಟ್ಟು ಪಾಕ್ ಸೈನಿಕರನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದರು.

Leave a Reply