ಭಾರತೀಯ ಚಿತ್ರರಂಗದಲ್ಲೇ ಬಹುದೊಡ್ಡ ಚಿತ್ರವನ್ನ ನಿರ್ಮಿಸಿದ್ದ ಸಂಸ್ಥೆಯಡಿ ನಿಖಿಲ್ ಹೊಸ ಸಿನಿಮಾ…!

ಸೀತಾರಾಮ ಕಲ್ಯಾಣ ಚಿತ್ರದ ಯಶಸ್ಸನ್ನು ಮೆಲುಕು ಹಾಕಲು ಸಮಯವಿಲ್ಲದ ರೀತಿಯಲ್ಲಿ ಮಂಡ್ಯ ಲೋಕ ಸಭೆ ಸಮರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಸೀತಾರಾಮ ಕಲ್ಯಾಣ ಚಿತ್ರದ ನಂತರ, ನಿಖಿಲ್ ಮೇಲಿನ ನಿರೀಕ್ಷೆ ಜನರಿಗೆ ಮತ್ತಷ್ಟು ಹೆಚ್ಚಿದ್ದು, ಅವರ ಮುಂದಿನ ಚಿತ್ರ ಯಾವುದು ಎಂಬ ಮಾಹಿತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ತಡವಾದ ಕುರುಕ್ಷೇತ್ರ…!

ಅಂದುಕೊಂಡಂತೆ ಆಗಿದ್ದರೆ ನಿಖಿಲ್ ವೀರ ಅಭಿಮನ್ಯು ಪಾತ್ರಕ್ಕೆ ಬಣ್ಣ ಹಚ್ಚಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ, ರೆಬೆಲ್ ಸ್ಟಾರ್ ದಿ.ಅಂಬರೀಷ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹೀಗೆ ದೊಡ್ಡ ತಾರಾ ಬಳಗವೇ ಹೊಂದಿರುವ, ಮುನಿರತ್ನ ನಿರ್ಮಾಣದ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರವಾದ ‘ಕುರುಕ್ಷೇತ್ರ’ ಇಷ್ಟರಲ್ಲಿ ಬಿಡುಗಡೆ ಆಗಬೇಕಿತ್ತು.
ಚಿತ್ರದ ನಿಖಿಲ್ ಕುಮಾರಸ್ವಾಮಿ ಅವರ ಅಭಿಮನ್ಯು ಟೀಸರ್ ಸುಮಾರು 5 ಲಕ್ಷ ಜನರು ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರವು ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಬಿಡುಗಡೆ ತಡವಾಗುತ್ತಿದೆ.
ಇದೆ ವೇಳೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಲೋಕ ಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವುದರಿಂದ, ಬಹುಷಃ ಚುನಾವಣೆ ಮುಗಿಯುವ ತನಕ ಯಾವುದೇ ಸಿನಿಮಾದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ.

ನಿಖಿಲ್ ಚಿತ್ರಕ್ಕೆ ಲೈಕ ಸಂಸ್ಥೆ ಹೂಡಿಕೆ…!

ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಹುದೊಡ್ಡ ಚಿತ್ರವಾದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ಬಹುಕೋಟಿ ವೆಚ್ಚದ ‘2.0’ ಚಿತ್ರವನ್ನು ನಿರ್ಮಾಣ ಮಾಡಿದ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಚಿತ್ರವೊಂದರಲ್ಲಿ ನಿಖಿಲ್ ಅವರು ಅಭಿನಯಿಸುತ್ತಿದ್ದಾರೆ ಎಂದು ಸ್ವತಃ ನಿಖಿಲ್ ಅವರೇ ಹೇಳಿದ್ದಾರೆ.

ಬಹುಭಾಷಾ ಚಿತ್ರ…!

ಲೈಕಾ ಸಂಸ್ಥೆ ನಿರ್ಮಿಸಲಿರುವ ಈ ಚಿತ್ರ ಬಹುಭಾಷೆಯಲ್ಲಿ ಅಂದ್ರೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮೂಡಿಬರುವ ಸಾಧ್ಯತೆ ಇದೆ. ಸದ್ಯಕ್ಕೆ ನಿರ್ದೇಶಕರು ಕೂಡ ಅಂತಿಮವಾಗಿಲ್ಲ. ನಿರ್ಮಾಪಕರ ಜೊತೆ ಮಾತ್ರ ಮಾತುಕತೆಯಾಗಿದ್ದು ಸಿನಿಮಾ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಕನ್ನಡದ ಸ್ಟಾರ್ ನಿರ್ಮಾಪಕನ ಜೊತೆ ಒಪ್ಪಂದ…!

ಇನ್ನು ಮತ್ತೊಂದು ಕಡೆ ಕನ್ನಡದ ಸ್ಟಾರ್ ನಿರ್ಮಾಪಕರಾದ ಜಯಣ್ಣ ಅವರ ಜೊತೆಯಲ್ಲಿ ನಿಖಿಲ್ ಸಿನಿಮಾ ಬಗ್ಗೆ ಮಾತುಕತೆಯಾಗಿದ್ದು, ಈ ಬ್ಯಾನರ್ ನಲ್ಲೂ ಸಿನಿಮಾ ಮಾಡುವ ಒಲವು ನಿಖಿಲ್ ತೋರಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಹೀಗೆ ಸಿನಿಮಾ ಕಮಿಟ್ ಮೆಂಟ್ ಇಟ್ಕೊಂಡಿದ್ದ ನಿಖಿಲ್ ಈಗ ಎಂಪಿ ಸ್ಥಾನಕ್ಕೆ ಸ್ಪರ್ಧೆ ಮಾಡುವ ತಯಾರಿ ನಡೆಸಿಕೊಂಡಿದ್ದಾರೆ. ಆದ್ದರಿಂದ ಅವರ ಮುಂದಿನ ಸಿನಿಮಾ ಅಪ್ಡೇಟ್ಸ್ ಗಾಗಿ ಕಾದು ನೋಡಬೇಕಿದೆ.

Leave a Reply