ಮಂಡ್ಯ ಜನರು ಮತ ಚಲಾಯಿಸುವ ಮುನ್ನ ಈ ವಿಷಯಗಳನ್ನು ಯೋಚಿಸಲೇಬೇಕು…!

ಲೋಕ ಸಭಾ ಚುನಾವಣೆಯ ಮಹಾ ಸಮರಕ್ಕೆ ಮೂಹರ್ತ ಫಿಕ್ಸ್ ಆಗಿದೆ.  ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು  ಫಲಿತಾಂಶ ಪ್ರಕಟವಾಗಲಿದೆ.

ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.

ಮಂಡ್ಯದ ಮಹಾ ಸಮರ…!


ಎಲ್ಲಾ ಕ್ಷೇತ್ರಗಳಿಂಗಿಂತಲೂ ಈ ಬಾರಿ ಮಂಡ್ಯ ಜನತೆ ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ನೋಡಲು ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಡಾ. ದಿ. ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಹಾಗು ವರ್ಷಾನುಗಟ್ಟಲೆಯಿಂದ ಮಂಡ್ಯ ಜನರನ್ನು ತಮ್ಮ ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ಪ್ರೀತಿಸಿ ಅವರ ಸೇವೆ ಮಾಡುತ್ತ, ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಹರಿಕಾರರಾಗಿರುವ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರ ಮೊಮ್ಮಗ, ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ, ಖ್ಯಾತ ಚಿತ್ರ ನಟ ನಿಖಿಲ್ ಅವರ ಮದ್ಯೆ ತೀವ್ರ ಪೈಪೋಟಿ ಸಜ್ಜಾಗಿದೆ.
ನೀವು ಮಂಡ್ಯ ಜಿಲ್ಲೆಯವರಾಗಿದ್ದು, ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದರೆ, ಮುಂದೆ ಓದಿ…

ಅಂಬಿ ಅಭಿಮಾನಿಗಳಿಗೆ ಉಂಟಾಗಿರುವ ಘಾಸಿ…!

ರೆಬೆಲ್ ಸ್ಟಾರ್ ಡಾ.ಅಂಬರೀಷ್, ಮಂಡ್ಯದ ಗಂಡು. ದಶಕಗಳ ಕಾಲ ಕರ್ನಾಟಕವನ್ನು ತಮ್ಮ ಚಿತ್ರಗಳ ಮೂಲಕ ರಂಜಿಸಿದ ಕನ್ನಡ ಚಿತ್ರರಂಗದ ಒಬ್ಬ ವಿಶೇಷ ನಟ. ತಮ್ಮ ಚಿತ್ರಗಳಿಗಿಂತಲೂ ತಮ್ಮ ಹೃದಯ ವೈಶಲ್ಯದಿಂದ, ಜನರ ಪ್ರೀತಿ ಹಾಗೂ ಅಭಿಮಾನವನ್ನು ಗಳಿಸಿದವರು. ಈಗ ಅವರ ಪತ್ನಿ ಸುಮಲತಾ ಅವರು ಮಂಡ್ಯ ಜನರ ಋಣ ತೀರಿಸಲು ಒಂದು ಅವಕಾಶ ಕೇಳುತ್ತಿದ್ದಾರೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಒಂದು ವಿಷಯವೇನೆಂದರೆ, ಅಂಬಿ ಸ್ವತಃ ತಾವೇ ರಾಜಕೀಯದಿಂದ ದೂರ ಸರಿದಿದ್ದರು. ಅಂಬಿಗೆ ಬೇಡದ ರಾಜಕೀಯ, ಅಂಬಿಗೆ ಇಷ್ಟವಿಲ್ಲದ ರಾಜಕೀಯ, ಈಗ ಅವರ ಪತ್ನಿಗೆ ಬೇಕೇ? ಅಂಬಿ ಅಭಿಪ್ರಾಯಕ್ಕೆ ವಿರುದ್ಧವಾಗಿ ಸುಮಲತಾ ಅವರು ನಡೆದುಕೊಳ್ಳುವುದು ಎಷ್ಟು ಸರಿ ಎಂಬುದೇ ರಾಜ್ಯದ ಜನರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ. ಇದು ಅಂಬಿ ಅಭಿಮಾನಿಗಳು ಯೋಚಿಸಲೇಬೇಕಾದ ಸಂಗತಿ…!

ದೇವೇಗೌಡರು ಮತ್ತು ಮಂಡ್ಯ …!

ಆದರೆ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ತಮ್ಮ ರಾಜಕೀಯ ವೃತ್ತಿಯನ್ನು ಆರಂಭಿಸಿದಾಗಲಿನಿಂದಲೂ ಮಂಡ್ಯ ಜಿಲ್ಲೆ, ಮಂಡ್ಯ ಜಿಲ್ಲೆಯ ಜನತೆ ಮೇಲೆ ಒಂದು ವಿಶೇಷ ಪ್ರೀತಿ ಇರುವುದು ಎಲ್ಲರಿಗು ಗೊತ್ತೇ ಇದೆ. ದೇವೇಗೌಡರು ಸುಮಾರು 40 ವರ್ಷಗಳಿಂದಲೂ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ, ಮಂಡ್ಯ ಜನರ ಒಳಿತಿಗಾಗಿ ಶ್ರಮಿಸಿದ್ದಾರೆ.
ಪಾಂಡವಪುರ, ಕೆ.ಆರ್ ನಗರ, ನಾಗಮಂಗಲದಲ್ಲಿ ನೀರಿನ ಅಭಾವ ಉಂಟಾದಾಗ, ಹಾಸನ ಜನತೆಯ ವಿರೋಧದ ನಡುವೆಯೂ ಹೇಮಾವತಿ ನೀರು ಮಂಡ್ಯ ಜಿಲ್ಲೆಗೆ ಹರಿಯುವಂತೆ ಮಾಡಿದ್ದು ದೇವೇಗೌಡರು. ಕಾವೇರಿ ನೀರಿನ ಸಮಸ್ಯೆ ಎದುರಾದಾಗ 70ರ ಮುಪ್ಪಿನಲ್ಲಿಯೂ, ಚಿರಯುವಕನಂತೆ ಉಪವಾಸ ಸತ್ಯಾಗ್ರಹ ಮಾಡಿ ಕಾವೇರಿ ನೀರನ್ನು ಉಳಿಸಿದವರು ದೇವೇಗೌಡರು. ಹೀಗೆ ತಮ್ಮ ರಾಜಕೀಯ ವೃತ್ತಿಯುದ್ದಕ್ಕೂ ಮಂಡ್ಯ ಜನರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಯುವ ನಾಯಕ ನಿಖಿಲ್…!

ಅದೇ ರೀತಿ, ಅವರ ಪುತ್ರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಮಂಡ್ಯ ಜನರ ಮೇಲೆ ವಿಶೇಷ ಪ್ರೀತಿ ಹಾಗು ಅಭಿಮಾನ ತೋರುತ್ತಾರೆ. ಅವರು ಅಧಿಕಾರದಲ್ಲಿ ಇಲ್ಲದೆ ಇರುವಾಗಲೂ ಆತ್ಮಹತ್ಯೆಗೆ ಶರಣಾದ ಅಸಹಾಯಕ ರೈತರ ಕುಟುಂಬಕ್ಕೆ ನೆರವಾಗಿ ಲಕ್ಷಾಂತರ ರೂಪಾಯಿಯ ಸಹಾಯ ಮಾಡಿದ್ದಾರೆ.
ಈಗ ಇವರ ಪುತ್ರ ನಿಖಿಲ್ ಅವರಿಗೂ ಕೂಡ ಮಂಡ್ಯ ಜನತೆಯ ಮೇಲೆ ವಿಶೇಷ ಒಲವು ಇರುವುದು, ಅವರು ರಾಜಕೀಯಕ್ಕೆ ಬರುವ ಮುನ್ನವೇ ಕಂಡು ಬರುತ್ತಿತ್ತು. ಮಂಡ್ಯ ಜಿಲ್ಲೆ ಬಳಿಯ ಪಾಂಡವಪುರದಲ್ಲಿ ಬಸ್ ದುರಂತ ನಡೆದಾಗ, ನಿಖಿಲ್ ಅವರು ಮೃತಪಟ್ಟ 25 ಮಂದಿಯ ಮನೆಗೂ ಸ್ವತಃ ತಾವೇ ಹೋಗಿ, ಸಂಧಾನ ಮಾಡಿ ಸಹಾಯ ಧನ ನೀಡಿದ್ದರು.

ಒಂದು ಅವಕಾಶ…!

ಹೀಗೆ ದೇವೇಗೌಡರ ಕುಟುಂಬದವರಿಗೂ, ಮಂಡ್ಯ ಜನತೆಗೂ ವಿಶೇಷ ನಂಟಿದೆ. ಈಗ ನಿಖಿಲ್ ಕುಮಾರಸ್ವಾಮಿ ಅವರು ತಮಗೂ ಸಹ ತಮ್ಮ ತಾತ ಹಾಗು ತಂದೆಯ ಹಾಗೆ ಮಂಡ್ಯ ಜನರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಅದರಲ್ಲೂ ನಿಖಿಲ್ ಅವರು ಒಬ್ಬ ಯುವ ನಾಯಕ. ಸಾಕಷ್ಟು ನೂತನ ಯೋಜನೆಗಳನ್ನು ಹೊಂದಿರುವ, ಈ ಕಾಲಕ್ಕೆ ತಕ್ಕಂತೆ ಒಂದು ಜಿಲ್ಲೆಯ ಅಭಿವೃದ್ಧಿಗೆ ಅವಶ್ಯವಿರುವ ಯೋಜನೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿರುವ ನಾಯಕ.

ಈಗ ಯಾರಿಗೆ ಮತ ಚಲಾಯಿಸಿದರೆ ಮಂಡ್ಯ ಜಿಲ್ಲೆಯ ಇನ್ನು ಹೆಚ್ಚಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ, ಯಾರಿಗೆ ಮತ ಚಲಾಯಿಸಿದರೆ ಮಂಡ್ಯ ಜನರ ಭವಿಷ್ಯ ಉಜ್ವಲವಾಗುತ್ತದೆ, ಯಾರಿಗೆ ಮತ ಚಲಾಯಿಸುವುದು ಅತ್ಯುತ್ತಮ ಆಯ್ಕೆ ಎಂಬುದು ನಿಮಗೆ ಸ್ಪಷ್ಟವಾಗಿ ಅರ್ಥವಾಗಿರಬೇಕು.

One thought on “ಮಂಡ್ಯ ಜನರು ಮತ ಚಲಾಯಿಸುವ ಮುನ್ನ ಈ ವಿಷಯಗಳನ್ನು ಯೋಚಿಸಲೇಬೇಕು…!

  1. Bunk Krishna says:

    E post hakiro gubal yaaroo…? Lo berkey nan makla…hassan bus stand nodidereno..? Mandya bus stand nodidira..? 40 year einda nim gowdru yen kitty gudde hakvre..? Avara hassan heg Ede swalpa nodi matnadi…

Leave a Reply