ಮನೆಗೆ ಹೋದವರಿಗೆ ಒಂದು ಲೋಟ ನೀರು ಸಹ ಕೊಡುವುದಿಲ್ಲ : ಡಿಸಿ ತಮ್ಮಣ್ಣನವರ ಮಾತು ನಿಜ ಎಂದ ಎಸ್.ಎಂ ಕೃಷ್ಣ…!

ಮಂಡ್ಯದಲ್ಲಿ ಲೋಕ ಸಭಾ ಚುನಾವಣೆಯ ಮಹಾ ಸಮರದ ತವಕ ದಿನದಿಂದ ದಿನಕ್ಕೆ ಬೇಸಿಗೆಯ ತವಕಕ್ಕಿಂತಲೂ ಹೆಚ್ಚುತ್ತಿದೆ. ಖ್ಯಾತ ಚಿತ್ರನಟ ದಿ. ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಟ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಪರ ಅಖಾಡಕ್ಕೆ ಇಳಿದಿದ್ದಾರೆ.

ರಾಜಕೀಯವಾಗಿ ಕುಮಾರಸ್ವಾಮಿ ಅವರು ಹಾಗು ಅಂಬರೀಷ್ ಅವರು ವಿರೋಧಿಗಳೇ ಆಗಿದ್ದರು, ಅದು ಕೇವಲ ಚುನಾವಣೆಗೆ ಸೀಮಿತ ಹಾಗೂ ಇಬ್ಬರ ಕುಟುಂಬದ ನಡುವೆಯೂ ಉತ್ತಮ ಬಾಂಧವ್ಯ ಇರುವುದು ಎಲ್ಲರಿಗೂ ಗೊತ್ತೇ ಇದೆ. ಕುಮಾರಸ್ವಾಮಿ ಅವರು ಅಂಬರೀಷ್ ಅವರ ಅಂತ್ಯ ಸಂಸ್ಕಾರವನ್ನು ನಡೆಸಿಕೊಟ್ಟ ರೀತಿ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಈಗ ಮತ್ತೆ ಈ ಕುಟುಂಬದ ಸದಸ್ಯರು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

‘ಸುಮಲತಾ ಅವರು ಮನೆ ಬಾಗಿಲಿಗೆ ಬಂದವರಿಗೆ ಕನಿಷ್ಠ ಪಕ್ಷ ಒಂದು ಲೋಟ ನೀರು ಸಹ ಕೊಡುತ್ತಿರಲಿಲ್ಲ’ ಎಂದು ಸಚಿವ ಡಿ ಸಿ ತಮ್ಮಣ್ಣ ಅವರು ಟೀಕಿಸಿದ್ದಾಗ ಸುಮಲತಾ ಅವರು ಈ ಮಾತನ್ನು ಒಪ್ಪಿರಲಿಲ್ಲ. ಆದರೆ ಸ್ವತಃ ಸುಮಲತಾ ಅವರು ಕೈ ಜೋಡಿಸಿರುವ ಬಿಜೆಪಿ ಪಕ್ಷದ ಹಿರಿಯ ನಾಯಕರೇ ಆದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಈ ಮಾತನ್ನು ನಿಜ ಎಂದು ಹೇಳಿದ್ದಾರೆ ತಮ್ಮಣ್ಣನವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

ಸಂದರ್ಶನವೊಂದರಲ್ಲಿ ಎಸ್ ಎಂ ಕೃಷ್ಣ ಅವರಿಗೆ ವರದಿಗಾರರು ಸುಮಲತಾ ಅವರ ಮೇಲೆ ಡಿ.ಸಿ ತಮಣ್ಣನವರ ಆರೋಪದ ಬಗ್ಗೆ ಕೇಳಿದಾಗ, ‘ಅದು ನಿಜಕ್ಕೂ ನಿಜವೇ ಬಿಡಿ…’ ಎಂದು ಹೇಳಿ ನಗುತ್ತಾರೆ. ಅವರ ಜೊತೆಯಲ್ಲಿದ್ದ ಆರ್ ಅಶೋಕ್ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸುವಂತೆ ಜೋರಾಗಿ ನಕ್ಕರು.

Leave a Reply