ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ‘ಗೋ ಬ್ಯಾಕ್ ಸುಮಲತಾ’ ಅಭಿಯಾನ…!

ಮಂಡ್ಯ ಜಿಲ್ಲೆಯ ಲೋಕ ಸಭಾ ಚುನಾವಣೆಯ ಅಖಾಡದಲ್ಲಿ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಅಂಬರೀಷ್ ಅವರು ಇತ್ತೀಚಿಗೆ ನಿಧನರಾಗಿರುವ ವಿಷಯ ಸುಮಲತಾ ಅವರಿಗೆ ಭಾವನಾತ್ಮಕ ಬೆಂಬಲ ದೊರಕಿದರೂ ಸಹ, ಹಲವಾರು ವರ್ಷಗಳಿಂದ ಮಂಡ್ಯ ಜನತೆಯ ಮೇಲೆ ವಿಶೇಷ ಒಲವಿನಿಂದ, ಅದರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಮೇಲುಗೈ ಇದ್ದೇ ಇದೆ.

ಅಂಬರೀಷ್ ಅವರನ್ನು ಇಡೀ ಕರ್ನಾಟಕದಲ್ಲಿ ದ್ವೇಷಿಸುವವರು ಯಾರು ಸಹ ಇರದೇ ಇದ್ದರು, ಮಂಡ್ಯ ಜಿಲ್ಲೆಯ ಜನತೆ ಮೂರು ಬಾರಿ ಕೈ ಹಿಡಿದು, ಬೆಂಬಲಿಸಿ ಅಧಿಕಾರ ನೀಡಿದಾಗ, ಅಭಿವೃದ್ಧಿ ಇರಲಿ, ಕನಿಷ್ಠ ಪಕ್ಷ ಮಂಡ್ಯ ಜಿಲ್ಲೆಗೆ ಸಹ ಬರುತ್ತಿರಲಿಲ್ಲ, ಇನ್ನು ಸುಮಲತಾ ಅವರು ಏನು ಮಾಡುತ್ತಾರೆ ಎಂದು ಮಂಡ್ಯದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಈಗ ಸುಮಲತಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘ ಗೋ ಬ್ಯಾಕ್ ಸುಮಲತಾ’ ಎಂಬ ಅಭಿಯಾನ ಕಾಡ್ಗಿಚ್ಚಿನಂತೆ ಹತ್ತಿಕೊಂಡಿದೆ. ವಿಶೇಷವೇನೆಂದರು ಈ ಅಭಿಯಾನದಲ್ಲಿ ಅಂಬಿ ಅಭಿಮಾನಿಗಳು ಸಹ ಪಾಲ್ಗೊಂಡಿದ್ದಾರೆ. ಏನಿದು ‘ಗೋ ಬ್ಯಾಕ್ ಸುಮಲತಾ ಅಭಿಯಾನ’? ಮುಂದೆ ಓದಿ…

ಹೆಂದೆಯೇ ಹೇಳಿದ ಹಾಗೆ, ಅಂಬರೀಷ್ ಅವರನ್ನು ದ್ವೇಷಿಸುವವರು ಇಡೀ ಕರ್ನಾಟಕದಲ್ಲೇ ಯಾರು ಇರಲಿಲ್ಲ. ಆದರೆ ಈಗ ಸುಮಲತಾ ಅವರ ಅಧಿಕಾರ ದಾಹದಿಂದ, ‘ಅಂಬಿಯ ಅಭಿಮಾನಿಗಳ ನಡುವೆ ಬಿರುಕು ಮೂಡಿದೆ. ಕನ್ನಡ ಚಿತ್ರರಂಗ ಎರಡು ಭಾಗವಾಗಿ ಒಡೆಯುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಪಕ್ಷ ಭೇದ ಮಾಡದೇ ಪ್ರೀತಿ ತೋರುತ್ತಿದ್ದ ಮಂಡ್ಯ ಜನತೆಯಲ್ಲಿ ಒಡಕು ಮೂಡಿದ.

ಹಣ, ಕೀರ್ತಿ ಸಂಪಾದಿಸಿದಷ್ಟು ಸುಲಭವಾಗಿ ಪ್ರೀತಿ, ಅಭಿಮಾನ ಗಳಿಸುವುದು ಸಾಧ್ಯವಿಲ್ಲ. ಇಷ್ಟು ವರುಷ ಅಂಬಿ ಗಳಿಸದ ಪ್ರೀತಿಗೆ ನೀವು ಕೊಡುತ್ತಿರುವ ಉಡುಗೊರೆ ಇದೇನಾ? ಇದೇನಾ ನೀವು ಮಂಡ್ಯ ಜನರ ಋಣ ತೀರಿಸುವ ಪರಿ?’ ಎಂದು ಮಂಡ್ಯ ಜನತೆ ಅದರಲ್ಲೂ ಅಂಬರೀಷ್ ಅಭಿಮಾನಿಗಳು ಸುಮಲತಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘ ಗೋ ಬ್ಯಾಕ್ ಸುಮಲತಾ’ ಅಭಿಯಾನದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

7 thoughts on “ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ‘ಗೋ ಬ್ಯಾಕ್ ಸುಮಲತಾ’ ಅಭಿಯಾನ…!

  1. K.B.Nagaraj says:

    Please go back sumalatha and save my Ambarish respects, don’t contest in any Elections,

  2. ಮೂಡಲಗಿರಿಗೌಡ says:

    ಇಷ್ಟೊಂದು ಅವಸರ ಬೇಕಾಗಿರಲಿಲ್ಲ ಸ್ವಲ್ಪ ದಿನ ಸುಮ್ನೆ ಇದ್ದು ಆಮೇಲೆ ಬಾರ್ಬಾವುದಿತ್ತು. ಯಾರೋ ತುಂಬಾ ಆಸೆ ಉಟ್ಟಿಸಿಬಿಟ್ಟಿದ್ದಾರೆ ಇದೆ ಒಳ್ಳೆ ಸಮಯಅಂತ.. ಸ್ವಲ್ಪ ಯೋಚನೆ ಮಾಡ್ಬೇಕಾಗಿತ್ತು, ಕುಮಾರ ಸ್ವಾಮಿಯವರಬಗ್ಗೆ ಎಂಥ ಒಳ್ಳೆ ಸಿಎಂ ಅಂತ

  3. Nanu ambianna abimani go back sumalatha

  4. Go back sumalatha madam….I m purely ambi sir abimani…bt still this time u r go back

  5. I soports sumalatha akka I am big fan for ambi

Leave a Reply