ಮಂಡ್ಯದಲ್ಲಿ ನಿಖಿಲ್ ರನ್ನು ಸೋಲಿಸಿ, 24 ಘಂಟೆಗಳಲ್ಲಿ ಬಿಜೆಪಿ ಸರ್ಕಾರ ರಚಿಸುತ್ತೇವೆ – ಯಡಿಯೂರಪ್ಪ

ನೋಡ ನೋಡುತ್ತಲೇ ಐದು ವರ್ಷಗಳು ಕಳೆದು ಮತ್ತೆ ಲೋಕ ಸಭಾ ಚುನಾವಣೆಯಾ ಮಹಾ ಸಮರಕ್ಕೆ ಭಾರತ ದೇಶ ಸಜ್ಜಾಗಿದೆ. ಕರ್ನಾಟಕದಲ್ಲಿ 28 ಲೋಕ ಸಭಾ ಕ್ಷೇತ್ರಗಳಿದ್ದು, ಮಂಡ್ಯ ಜಿಲ್ಲೆ ಹೈ ವೋಲ್ಟೇಜ್ ಕ್ಷೇತ್ರ ಎಂದು ಹೇಳಬಹುದು. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ನ ಪರ ಅಖಾಡಕ್ಕೆ ಇಳಿಯುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಎಸ್.ಎಂ ಕೃಷ್ಣ ಅವರು ಕಣ್ಣಕ್ಕಿಳಿಯಬಹುದು ಎಂಬ ವದಂತಿಗಳು ಕೇಳಿ ಬರುತ್ತಿದ್ದರೂ, ಪಕ್ಷದ ನಾಯಕರಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಮಂಡ್ಯ ಲೋಕ ಸಭಾ ಚುನಾವಣೆ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ‘ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ, 24 ಘಂಟೆಗಳಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುತ್ತೇವೆ’ ಎಂದು ಮತ್ತೆ ಸರ್ಕಾರ ಪತನಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಆಗುತ್ತಿದ್ದು, ಕೆಸರಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಆಪರೇಷನ್ ಕಮಲಾ ಮಾಡಿ ಇಷ್ಟು ಬಾರಿ ಕೈ ಸುಟ್ಟುಕೊಂಡು, ರಾಜ್ಯದ ಜನರಿಂದ ಚೀಮಾರಿ ಹಾಕಿಸಿಕೊಂಡಿದ್ದರೂ ಇನ್ನು ಬುದ್ದಿ ಬಂದಿಲ್ಲ. ನಾಯಿ ಬಾಲ ಎಂದಿಗೂ ಡೊಂಕೇ ಎಂಬುದಕ್ಕೆ ಯಡಿಯೂರಪ್ಪನವರೇ ಪ್ರತ್ಯಕ್ಷ ಸಾಕ್ಷಿ ಎಂಬ ಟೀಕೆಗಳು ಕೇಳಿ ಬರುತ್ತಿವೆ.

3 thoughts on “ಮಂಡ್ಯದಲ್ಲಿ ನಿಖಿಲ್ ರನ್ನು ಸೋಲಿಸಿ, 24 ಘಂಟೆಗಳಲ್ಲಿ ಬಿಜೆಪಿ ಸರ್ಕಾರ ರಚಿಸುತ್ತೇವೆ – ಯಡಿಯೂರಪ್ಪ

 1. Siddalingayya Sankannavar says:

  E yadurappanige yavag adikarad huchchu bidatto gottilla

 2. Siddganga Siddu says:

  ಹಾಡುದ್ದನೆ ಹಾಡು ಕಿಸಬಾಯಿ ದಾಸಹಂತ.
  ನೀವತ್ತಾನೆ ಏನು ಯಡ್ಡಿಜೀ.
  ನಿಮ್ಮ ಮಾತನ್ನು ಶತ್ರು ದೇಶದವರು ಕೂಡ .ಮಾತಡೂತರ ಮಾಡಬಿಟ್ಟರಿ

 3. ನವೀನ says:

  ಕಾಮಿಡಿ ಪೀಸ್ ಯಡ್ರಂಗೆ ಹುಚ್ಚು ಹಿಡಿದಿದೆ..
  ಹುಚ್ಚು ಬಿಡೊತನಕ ಸಿಎಂ ಆಗಲ್ಲ, ಸಿಎಂ ಆಗೊತನಕ ಹುಚ್ಚು ಬಿಡಲ್ಲ

Leave a Reply