ಸುಮಲತಾ ನನ್ನ ಮಗಳಾಗಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಡ ಎಂದು ಹೇಳುತ್ತಿದ್ದೆ – ರಾಜಗುರು ದ್ವಾರಕಾನಾಥ್

ರಾಜಗುರು ದ್ವಾರಕನಂತಹ ಅವರು ಮಂಡ್ಯ ಕ್ಷೇತ್ರದ ಲೋಕ ಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರು ಸ್ಪರ್ಧಿಸುವುದರ ಬಗ್ಗೆ ಮಾತನಾಡಿದ್ದಾರೆ. ಇಂದು ಅಂಬರೀಷ್ ಅವರು ನಮ್ಮೊಂದಿಗೆ ಇಲ್ಲ. ಅದು ತುಂಬಾ ಬೇಸರದ ಸಂಗತಿ. ಅಂಬರೀಷ್ ಅವರ ಅಂತ್ಯೇಷ್ಠಿಯನ್ನು ಸುಮಲತಾ ಅವರ ಸಹೋದರನ ಸ್ಥಾನದಲ್ಲಿ ನಿಂತು ಸಂಪೂರ್ಣ ಜವಾಬ್ದಾರಿ ವಹಿಸಿ, ಸುಗಮವಾಗಿ ರಾಜ ಮರ್ಯಾಧಿಯಲ್ಲಿ ನಡೆಸಿಕೊಟ್ಟಿದ್ದು ಕುಮಾರಸ್ವಾಮಿ ಅವರು. ಆ ಪುಣ್ಯ ಅವರಿಗೆ ಬಂದಿದೆ. ನಮಗೆ ಉಪಕಾರ ಮಾಡಿದವರಿಗೆ ನಾವು ಉಪಕಾರ ಮಾಡದಿದ್ದರೂ, ಕನಿಷ್ಠ ಪಕ್ಷ ಅವರ ಬಗ್ಗೆ ಕೃತಜ್ಞತೆ ಆದರೂ ಇಟ್ಟುಕೊಳ್ಳಬೇಕು ಅಲ್ಲವೆ? ಎಂದು ಖಾಸಗಿ ಸುದ್ದಿ ವಾಹಿನಿ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಸುಮಲತಾ ಕೂಡ ನನ್ನ ಮಗಳು ಇದ್ದ ಹಾಗೆ. ನನ್ನ ಮಗಳೇ ಬಂದು ಕೇಳಿದ್ದರು, ತಾಯಿ ದಯವಿಟ್ಟು ಸ್ಪರ್ಧಿಸಬೇಡ ಎಂದು ಹೇಳುತ್ತಿದ್ದೆ. ಒಬ್ಬ ಮಗನಾಗಿ, ಒಬ್ಬ ಸಹೋದರನಾಗಿ ನಿಂತು ಎಲ್ಲ ರೀತಿಯ ಪ್ರೀತಿಯಿಂದ ನಿನ್ನ ಯಜಮಾನನ್ನು ಜೋಪಾನ ಮಾಡಿ ಅವರ ಅಂತ್ಯೇಷ್ಠಿಯನ್ನು ಮಾಡಿದ್ದಾರೆ. ಮುಂದೆ ನಿನಗೆ ಕಾಲ ಬರುತ್ತದೆ ಎಂದು ಹೇಳುತ್ತಿದ್ದೆ ಎಂದು ದ್ವಾರಕಾನಾಥ್ ಅವರು ಹೇಳಿದರು.

Leave a Reply