ಸಮೀಕ್ಷೆ ಹೆಸರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿರುವ BTVಯ ನಿರೂಪಕಿ ರಾಧಾ ಹಿರೇಗೌಡರ್ ಅವರನ್ನು ಹಾಸನದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಿಕೋದ್ಯಮದ ನೈತಿಕತೆ ಮರೆತು ಎಂಜಿಲು ಕಾಸಿಗೆ ಕೈ ಚಾಚಿ ಸಮೀಕ್ಷೆ ಹೆಸರಿನಲ್ಲಿ ಕೇವಲ ಬಿಜೆಪಿ ಬೆಂಬಲಿಗರ ಅಭಿಪ್ರಾಯ ಪ್ರಸಾರ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಟಿವಿ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದಾರೆ.
ಆದರೆ Btvಯ ಈ ಚೀಪ್ ಗಿಮಿಕ್ ಹಾಸನದಲ್ಲಿ ಕೆಲಸಕ್ಕೆ ಬಂದಿಲ್ಲ. ಹಾಸನದ ಜನತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ನೀವೇನು ಬಿಜೆಪಿ ಏಜೆಂಟ್ ಏನ್ರಿ ?” ಎಂದು ಪ್ರಶ್ನಿಸಿ ಬೆವರಿಳಿಸಿದ್ದಾರೆ. ಶುರು ಮಾಡುತ್ತಲೇ “ಈಗ ಮೋದಿ ಅಲೆ ಇರುವುದರಿಂದ…” ಎಂದು ಹೇಳುತ್ತಾ ತನ್ನ ಮಾತನ್ನು ಶುರು ಮಾಡಿದ ರಾಧಾ ಹಿರೇಗೌಡರ್ ಗೆ ಆ ಮಾತನ್ನು ಪೂರ್ಣಗೊಳಿಸಲು ಸಹ ಜನರು ಅವಕಾಶ ನೀಡದೆ ದೇವೇಗೌಡರಿಗೆ ಜಯಕಾರ ಹಾಕಲು ಶುರು ಮಾಡಿದರು.
ಮೋದಿ ನಮಗೆ ಏನು ಮಾಡಿಲ್ಲ. ಇಲ್ಲಿ ಏನಿದ್ದರೂ ದೇವೇಗೌಡರ ಹವಾ. ನಮ್ಮ ಜಿಲ್ಲೆ ಅಭಿವೃದ್ಧಿ ದೇವೇಗೌಡರಿಂದಲೇ ಹೊರೆತು ಮೋದಿಯಿಂದ ಅಲ್ಲ. ಪ್ರೀತಮ್ ಗೌಡ ಸಹ ಏನು ಮಾಡಿಲ್ಲ. ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಹಾಸನದ ಜನತೆ ಅಭಿಪ್ರಾಯ ವ್ಯಕ್ತಪಡಿಸಿದಾಗ ರಾಧಾ ಹಿರೇಗೌಡರ್ ಅವರ ಮುಖ ಪೆಚ್ಚಾಗಿದ್ದು ಹಾಸ್ಯಾಸ್ಪದವಾಗಿತ್ತು.
Chappaliyalli hodibeku ethara news kottu Nov untu madorge
ಮಾಧ್ಯಮ ಮಿತ್ರರೇ ತಾವು ಜನರ ಸಮೀಕ್ಷೆ ತೆಗೆದುಕೊಳ್ಳಬೇಕು ಯಾವುದೇ ಪಕ್ಷದ ಪರ ಪ್ರಚಾರ ಮಾಡ್ಬಾರ್ದು.ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ ಕುಮಾರಣ್ಣನ ಕುಟುಂಬದಲ್ಲಿ ಮಾತ್ರ ಅಲ್ಲ.