ರಾಜಕೀಯದಿಂದ ನಮ್ಮ ಸ್ನೇಹ ಹಾಳಾಗಲು ಬಿಡುವುದಿಲ್ಲ…! – ನಿಖಿಲ್ ಕುಮಾರಸ್ವಾಮಿ

ಮಂಡ್ಯ ಲೋಕ ಸಭಾ ಮಹಾ ಯುದ್ಧದ ಅಖಾಡದಲ್ಲಿ ಕರ್ನಾಟಕದ ಎರಡು ಪ್ರತಿಷ್ಠಿತ ಕುಟುಂಬಗಳ ಕುಡಿಗಳು ಎದುರಾಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ಕೊಟ್ಟಿರುವ ಮಂಡ್ಯದ ಗಂಡು ಅಂಬರೀಷ್ ಅವರ ಪತ್ನಿ ಸುಮಲತಾ ಅವರಿಗೆ ಬೆಂಬಲವಾಗಿ ಅವರ ಪುತ್ರ ಅಭಿಷೇಕ್ ಗೌಡ ಅವರು ನಿಂತಿದ್ದಾರೆ. ಮತ್ತೊಂದು ಕಡೆ ಮಂಡ್ಯದ ಜನರು ತಮ್ಮ ಆಸ್ತಿಯೆಂದೇ ಪರಿಗಣಿಸುವ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ತೊಡೆ ತಟ್ಟಿ ಅಖಾಡಕ್ಕೆ ಇಳಿದಿದ್ದಾರೆ.

ವಿಶೇಷವೇನೆಂದರೆ ಕುಮಾರಸ್ವಾಮಿ ಅವರು ಹಾಗು ಅಂಬರೀಷ್ ಅವರದ್ದು ದಶಕಗಳ ಸ್ನೇಹ. ರಾಜಕೀಯವಾಗಿ ಪ್ರತಿಸ್ಪರ್ಧಿಗಳೇ ಆಗಿದ್ದರೂ, ಎರಡು ಕುಟುಂಬಕ್ಕೂ ಉತ್ತಮ ಬಾಂಧವ್ಯವಿತ್ತು. ಅಷ್ಟೇ ಅಲ್ಲದೆ ಹಲವಾರು ಬಾರಿ ಕುಮಾರಸ್ವಾಮಿ ಅವರು, ಅಂಬರೀಷ್ ನನ್ನ ಅಣ್ಣನಂತೆ ಎಂದು ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಕೇವಲ ತನ್ನ ಜವಾಬ್ದಾರಿಯೆಂದು ನೋಡದೆ, ರಾಜ ಮರ್ಯಾಧಿ ಇಂದ, ಸುಮಲತಾ ಅವರ ಸೋಹದರನ ಸ್ಥಾನದಲ್ಲಿ ನಿಂತು ಕೊಂಚವೂ ಲೋಪ ದೋಷಗಳು ಉಂಟಾಗದಂತೆ ನೋಡಿಕೊಂಡು ಕುಮಾರಸ್ವಾಮಿ ಅವರು ಸುಗಮವಾಗಿ ನಡೆಸಿಕೊಟ್ಟಿದ್ದರು.

ಕುಮಾರಸ್ವಾಮಿ ಅವರು ಹಾಗು ಅಂಬರೀಷ್ ಅವರಂತೆ ಇವರ ಪುತ್ರರಾದ ನಿಖಿಲ್ ಹಾಗು ಅಭಿಷೇಕ್ ಕೂಡ ಉತ್ತಮ ಸ್ನೇಹಿತರು. ಈಗ ಅವರಿಬ್ಬರಿಗೂ ಪೈಪೋಟಿ ಎದುರಾಗಿರುವುದರ ಬಗ್ಗೆ ನಿಖಿಲ್ ಅವರನ್ನು ಕೇಳಿದಾಗ ” ರಾಜಕೀಯದಿಂದ ನಮ್ಮಿಬ್ಬರ ಸ್ನೇಹ ಹಳಸಲು ನಾನು ಅವಕಾಶ ನೀಡುವುದಿಲ್ಲ. ರಾಜಕೀಯ ಬೇರೆ ನಮ್ಮ ಸ್ನೇಹ ಬೇರೆ” ಎಂದು ಹೇಳಿದ್ದಾರೆ.

Leave a Reply