ನಿಖಿಲ್ ಹೆಸರು ಘೋಷಿಸುತ್ತಿದ್ದಂತೆ ಎಸ್.ಎಂ ಕೃಷ್ಣ ಮನೆಗೆ ಓಡಿದ ಸುಮಲತಾ..!

ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷವು ಲೋಕ ಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನು ನೆನ್ನೆ(ಗುರುವಾರ), ತಮ್ಮ ನೆಚ್ಚಿನ ನಾಯಕರನ್ನು ನೋಡಲು ಸಜ್ಜಾಗಿದ್ದ ಮಂಡ್ಯದ ಸಹಸ್ರಾರು ಜನರ ಮುಂದೆ ಘೋಷಿಸಿತು.

ಹಲವಾರು ವರ್ಷಗಳಿಂದ ಮಂಡ್ಯ ಜನತೆ ಮೇಲಿನ ವಿಶೇಷ ಓಲುವಿನಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗು ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ತಮ್ಮ ಪಕ್ಷದ ಮಂಡ್ಯ ಲೋಕ ಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಿಸಿದರು.

ಜೆಡಿಎಸ್ ಪಕ್ಷವು ನಿಖಿಲ್ ಕುಮಾರಸ್ವಾಮಿ ಅವರನ್ನು ಲೋಕ ಸಭಾ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸುತ್ತಿದ್ದಂತೆ ಅಂಬಿ ಸಾವನ್ನು ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಸುಮಲತಾ ಅವರು ಎಸ್.ಎಂ ಕೃಷ್ಣ ಅವರ ಮನೆಗೆ ಬೆಂಬಲಕ್ಕಾಗಿ ಓಡಿದ್ದಾರೆ.

ಈ ಹಿಂದೆ ಅಂಬರೀಷ್ ಅವರ ರಾಜಕೀಯ ವೃತ್ತಿಯನ್ನೇ ಕೊನೆಗಾಣಿಸಿದ ಎಸ್.ಎಂ ಕೃಷ್ಣ ಅವರ ಬೆಂಬಲವನ್ನು ಸುಮಲತಾ ಅವರು ಬಯಸುತ್ತಿರುವುದು, ಅವರ ಅಧಿಕಾರ ವ್ಯಾಮೋಹವನ್ನು ಎತ್ತಿ ಹಿಡಿಯುತ್ತಿದೆ.

One thought on “ನಿಖಿಲ್ ಹೆಸರು ಘೋಷಿಸುತ್ತಿದ್ದಂತೆ ಎಸ್.ಎಂ ಕೃಷ್ಣ ಮನೆಗೆ ಓಡಿದ ಸುಮಲತಾ..!

Leave a Reply