“ದರ್ಶನ್, ಯಶ್ ಜನ ಸೇರಿಸಬಹುದೇ ಹೊರೆತು ಮತ ಗೆಲ್ಲಿಸಲು ಸಾಧ್ಯವಿಲ್ಲ” – ಮಂಡ್ಯ ಜನತೆ

ಸುಮಲತಾ ಅಂಬರೀಷ್ ಅವರು ಇಂದು ಸುದ್ದಿಘೋಷ್ಠಿ ನಡೆಸಿ ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು. ಸುಮಲತಾ ಅವರಿಗೆ ಬೆಂಬಲವಾಗಿ ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಯಶ್ ಹಾಗು ದರ್ಶನ್ ಅವರು ಬಂದಿದ್ದರು. ಯಶ್ ಹಾಗು ದರ್ಶನ್ ನಾವಿಬ್ಬರು ಜೋಡಿ ಎತ್ತುಗಳ ರೀತಿಯಲ್ಲಿ ಸುಮಲತಾ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.

ಆದರೆ ಇದರ ಬಗ್ಗೆ ಜನರ ಅಭಿಪ್ರಾಯ ಸುದ್ಧಿ ವಾಹಿನಿಗಳು ಕೇಳಿದಾಗ, ಸುಮಲತಾ ಅವರ ಪರ ದರ್ಶನ ಹಾಗು ಯಶ್ ಮಾತ್ರವಲ್ಲ ಇಡೀ ಚಿತ್ರರಂಗವೇ ಪ್ರಚಾರ ಮಾಡಲು ಮಂಡ್ಯಕ್ಕೆ ಬಂದರು, ಅವರು ಕೇವಲ ಜನ ಸೇರಿಸಬಹುದೇ ಹೊರೆತು ಮತ ಗೆಲ್ಲಿಸಲು ಅಸಾಧ್ಯ. ಇದಕ್ಕೆ ಉದಾಹರಣೆ ಬೇರೆ ಯಾರು ಅಲ್ಲ ಸ್ವತಃ ಅಂಬರೀಷ್ ಅವರು. ಅವರ ಪರ ದರ್ಶನ್, ಯಶ್ ಎಲ್ಲರು ಬಂದರೂ ಸಹ ಮೂರು ಬಾರಿ ಮಂಡ್ಯದಲ್ಲೇ ಸೋತಿದ್ದಾರೆ. ರಮ್ಯಾ ಅವರದ್ದು ಇದೇ ಗತಿ ಎಂದು ಮಂಡ್ಯದ ಹಲವಾರು ಜನರು ಹೇಳಿದರು.

ಸಿನಿಮಾ ತಾರೆಯರು ಕೇವಲ ಮನೋರಂಜನೆಗೆ, ಅಭಿವೃದ್ಧಿಗೆ ಏನಿದ್ದರೂ ಕೆಲಸ ಮಾಡುವವರು ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

3 thoughts on ““ದರ್ಶನ್, ಯಶ್ ಜನ ಸೇರಿಸಬಹುದೇ ಹೊರೆತು ಮತ ಗೆಲ್ಲಿಸಲು ಸಾಧ್ಯವಿಲ್ಲ” – ಮಂಡ್ಯ ಜನತೆ

  1. K B NAGARAJ says:

    Mondya people will vote only on the basis of development and development has been done by only devegowda family and these two heroes are only entertainer not more than that.

    1. Sure, ee ethu galu estu duddidu sumalatha avarige koduthe anodu mukya Alla, jannarige enu siguthe anodu mukya, evarge beleyokke mandya beku, yavdu sari yavdu thappu beda

  2. K B NAGARAJ says:

    Siddaramaiah lost his MLA Seat after campaigning by Darshan and here also repeating same, sumalatha will loose……

Leave a Reply