ಇಷ್ಟು ದಿನ ಒಗ್ಗಟ್ಟಾಗಿದ್ದ ಮಂಡ್ಯ ಜನತೆ ಈಗ ಇಬ್ಬಾಗ….!?

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಲೋಕ ಸಭಾ ಚುನಾವಣೆ ಮಹಾ ಸಮರದ ಶಾಖ, ಬೇಸಿಗೆಯ ಶಾಖಕ್ಕಿಂತಲೂ ಹೆಚ್ಚುತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಚುನಾವಣೆ ಮೇಲೆ ಇಡೀ ರಾಜ್ಯದ ಕಣ್ಣಿದ್ದು, ಈ ಬಾರಿ ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಇದ್ದಂತೆ. ಇದು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಬೇಕೆ ಹೊರೆತು, ವೈರತ್ವ ಉಂಟು ಮಾಡಬಾರದು . ಆದರೆ ಮಂಡ್ಯ ಜಿಲ್ಲೆಯಲ್ಲಿ ಚುನಾವಣೆ ಘೋಷಣೆಯಾದಾಗಲಿನಿಂದಲೂ, ಮಂಡ್ಯ ಜನರ ನಡುವೆ ಬಿರುಕು ಮೂಡಿದಂತಿದೆ.

ಹೌದು. ಚುನಾವಣೆಯಂದರೆ, ಒಂದು ಪ್ರದೇಶದ ಜನ ತಮ್ಮ ನೆಚ್ಚಿನ ಪಕ್ಷ/ಅಭ್ಯರ್ಥಿಗಳ ಪರ ವಾಗ್ದಾಳಿ ನಡೆಸುವುದು ಸಹಜ. ಅದು ವೈಕ್ತಿಕ ದ್ವೇಷವಾಗಿರುವುದಿಲ್ಲ. ಆದರೆ ಈ ಬಾರಿ ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಕರ್ನಾಟಕದ ಎರಡು ಪ್ರತಿಷ್ಠಿತ ಕುಟುಂಬಗಳು ಸ್ಪರ್ಧಿಸುತ್ತಿದ್ದು, ಪೈಪೋಟಿ ಗಗನಕ್ಕೇರಿದೆ. ಇದರಿಂದ ಒಗ್ಗಟ್ಟಿಗೆ ಹೆಸರುವಾಸಿಯಾಗಿದ್ದ ಮಂಡ್ಯ ಜನತೆಯ ನಡುವೆ ಬಿರುಕು ಮೂಡಿದೆ.

ಅದರಲ್ಲೂ ಮಂಡ್ಯ ಜಿಲ್ಲೆಯ ಬಹುತೇಕ ಜನರು ಸೇರಿರುವ ಒಕ್ಕಲಿಗ ಸಮುಧಾಯ ಈ ಚುನಾವಣೆಯಿಂದ ಇಬ್ಬಾಗವಾಗಿರುವುದಂತೂ ನಿಜ.

2 thoughts on “ಇಷ್ಟು ದಿನ ಒಗ್ಗಟ್ಟಾಗಿದ್ದ ಮಂಡ್ಯ ಜನತೆ ಈಗ ಇಬ್ಬಾಗ….!?

  1. K B NAGARAJ says:

    VERY SAD NEWS AND ALL VOKKALIGAS SHOULD STAY WITH DEVEGOWDA FAMILY

  2. Subramanya Lingappa says:

    ಜೆಡಿಎಸ್ ನ ಆಮಿಶಗಳಿಂದ, ಬೆದರಿಕೆಯಿಂದ ಇಬ್ಬಾಗ ಆಗ್ತಾಯಿದೆ

Leave a Reply