ಸ್ಟಾರ್ ಗಳು ನಿಖಿಲ್ ಪರ ಪ್ರಚಾರಕ್ಕೆ ಬರುತ್ತಾರಾ ಎಂದು ಕೇಳಿದಕ್ಕೆ ಅನಿತಾ ಕುಮಾರಸ್ವಾಮಿ ಉತ್ತರ ಏನು ಗೊತ್ತ…!?

ಈ ಬಾರಿ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾದ ಮಂಡ್ಯ ಲೋಕ ಸಭಾ ಚುನಾವಣೆ ಮಹಾ ಸಮರದಲ್ಲಿ ಕರ್ನಾಟಕದ ಎರಡು ಪ್ರತಿಷ್ಠಿತ ಕುಟುಂಬದ ಸದಸ್ಯರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಒಂದು ಕಡೆ ಮಂಡ್ಯ ಜನರಿಗೆ ಅಂಬರೀಷ್ ಅವರ ಮೇಲಿನ ಅಭಿಮಾನವನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಅವರ ಪತ್ನಿ ಸುಮಲತಾ ಅವರು ಕಣ್ಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವ, ಮಂಡ್ಯ ಜನತೆಗೆ ಅಪಾರ ಕೊಡುಗೆ ನೀಡಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗು ಹೆಚ್.ಡಿ ದೇವೇಗೌಡರ ಸಾಧನೆಗಳನ್ನು ಮುಂದಿಟ್ಟು, ಅಖಾಡಕ್ಕೆ ಇಳಿದಿದ್ದಾರೆ.

ಸುಮಲತಾ ಅವರು ಚಿತ್ರರಂಗದವರಾಗಿದ್ದಿರಿಂದ ದರ್ಶನ, ಯಶ್ ರಂತಹ ಹಲವಾರು ಖ್ಯಾತ ನಟರು ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ನಿಖಿಲ್ ಪರ ಪ್ರಚಾರ ಮಾಡಲು, ಯಾವ ಸ್ಟಾರ್ ಗಳು ಬರುವುದಿಲ್ಲವೇ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕೇಳಿದಾಗ, ಮಂಡ್ಯ ಜನರಿಗೆ ಕುಮಾರಸ್ವಾಮಿ ಅವರು ಹಾಗು ದೇವೇಗೌಡರೇ ದೊಡ್ಡ ಸ್ಟಾರ್ ಗಳು. ಅವರು ಮಂಡ್ಯ ಜನರಿಗಾಗಿ ಮಾಡಿರುವ ಕೆಲಸಗಳೇ ನಿಖಿಲ್ ಗೆಲುವಿಗೆ ಸಹಾಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2 thoughts on “ಸ್ಟಾರ್ ಗಳು ನಿಖಿಲ್ ಪರ ಪ್ರಚಾರಕ್ಕೆ ಬರುತ್ತಾರಾ ಎಂದು ಕೇಳಿದಕ್ಕೆ ಅನಿತಾ ಕುಮಾರಸ್ವಾಮಿ ಉತ್ತರ ಏನು ಗೊತ್ತ…!?

  1. K B NAGARAJ says:

    Mondya people should not loose Devegowda family and If they loosed then god has to save them

  2. Let them come to Mandaya though thos time will support to Ambi

Leave a Reply