ಮಂಡ್ಯದಿಂದ ಜೋಡಿ ಎತ್ತುಗಳು ಪರಾರಿ…!

ನಾವು ಅಂಟಾರ್ಟಿಕಾ ಅಥವಾ ಪಾಕಿಸ್ತಾನದಿಂದ ಬಂದಿಲ್ಲ, ಇದೇ ಪಾಲಹಳ್ಳಿ ಪಂಪ್ ಹೌಸ್ ನಲ್ಲಿ ಈಜು ಹೊಡೆದವರು, ಇಲ್ಲಿಂದಲೇ ಹೋಗಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡವರು. ನೋಡೇ ಬಿಡೋಣ, ಇಂದಿನಿಂದ 18ನೇ ತಾರೀಕಿನ ವರೆಗೂ ನಮ್ಮ ಪರೇಡ್ ನಡೆಯುತ್ತದೆ ಎಂದು ಸಿನಿಮಾ ಸ್ಟೈಲ್ ನಲ್ಲಿ ನೆನ್ನೆ ಸುಮಲತಾ ನಾಮಪತ್ರ ಸಲ್ಲಿಸಿದ ಮೇಲೆ ಡೈಲಾಗ್ ಹೊಡೆದ ಯಶ್ ಹಾಗು ದರ್ಶನ ಅವರು ನೆನ್ನೆ ಮಧ್ಯಾಹ್ನವೇ ಮಂಡ್ಯದಿಂದ ಪರಾರಿಯಾಗಿದ್ದಾರೆ.

ಈಗ ಮಂಡ್ಯ ಜನತೆ, ಚುನಾವಣೆ ತನಕ ಮಂಡ್ಯ ಬಿಟ್ಟು ಹೋಗೋದಿಲ್ಲ ಎಂದವರು, ಭಾಷಣ ಮುಗಿದ ತಕ್ಷಣ ಊರು ಬಿಟ್ಟಿದ್ದಾರೆ. ಇನ್ನು ಇವರ ಮಾತು ನಂಬಿ ಸುಮಲತಾ ಅವರಿಗೆ ಮತ ಚಲಾಯಿಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಮತ ಹಾಕಿಸಿ, ಸುಮಲತಾ ಅವರನ್ನು ಗೆಲ್ಲಿಸಿದ ಮೇಲೆ ಅವರ ಪಾಡಿಗೆ ಅವರು ಶೂಟಿಂಗ್ ಗೆ ಹೋಗುತ್ತಾರೆ. ಸುಮಲತಾ ಅವರು ಕೆಲಸ ಮಾಡಲಿಲ್ಲ ಎಂದರೆ, ನಾವು ಯಾರನ್ನು ಕೇಳಬೇಕು ಎಂದು ದರ್ಶನ್ ಹಾಗು ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಬರುತ್ತಿದ್ದವು. ಈಗ ಭಾಷಣ ಮುಗಿದ ತಕ್ಷಣ ಊರು ಬಿಟ್ಟಿರುವುದು ಮತ್ತಷ್ಟು ಟೀಕೆಗೆ ಕಾರಣವಾಗಿದೆ.

2 thoughts on “ಮಂಡ್ಯದಿಂದ ಜೋಡಿ ಎತ್ತುಗಳು ಪರಾರಿ…!

  1. K B NAGARAJ says:

    ದೇವರೆ ಕಾಪಡಬೇಕು

  2. ಕೃಷ್ಣಯ್ಯ ತಿಮ್ಮೇಗೌಡ ಕೃಷ್ಣಯ್ಯ ತಿಮ್ಮೇಗೌಡ says:

    ಅವರವರು ಅವರ ಸಂಪಾದನೆ ಮಾಡಿಕೊಳ್ಳಲು ಹೋಗುತ್ತಾರೆ .ಆಗ ನಿಮ್ಮ ಮುಖ ನೋಡೋದಿರಲಿ ನಿಮ್ಮನ್ನು ಹತ್ತಿರಕ್ಕೆ ಸುಳಿಯಲೂ ಬಿಡುವುದಿಲ್ಲ .ಕುಮಾರಸ್ವಾಮಿ ಯವರನ್ನು ನೀವು ಸುಲಭವಾಗಿ ಭೇಟಿ ಮಾಡಬಹುದು .ಯೋಚಿಸಿ ಒಂದು ದಿನದ ಆಸೆಗೆ ಇಡೀ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಹಾಳುಮಾಡಬೇಡಿ .ಯೋಚಿಸಿ ಈಗಿನ ಉತ್ಸಾಹ ಗೆದ್ದ ಮೇಲೆ ಕಾಣಲು ಸಾದ್ಯವಿಲ್ಲ .ಕುಮಾರಸ್ವಾಮಿಯವರನ್ನು ಕಳೆದು ಕೊಳ್ಳಬೇಡಿ .

Leave a Reply