ಕಲ್ಲು ತೂರಾಟದ ದಿನವೇ ಮನೆ ಸಿಸಿ ಟಿವಿ ಕೆಟ್ಟು ಹೋಗಿತ್ತಂತೆ….!

ಕನ್ನಡ ಚಿತ್ರರಂಗದ ಖ್ಯಾತ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ಇಂದು ಮುಂಜಾನೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ ಎಂಬ ಪ್ರಕರಣ ದಾಖಲಾಗಿದೆ.

ನೆನ್ನೆ ರಾತ್ರಿ ಕಾಂಗ್ರೆಸ್-ಜೆಡಿಎಸ್ ಲೋಕ ಸಭಾ ಚುನಾವಣಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸೋಮನಹಳ್ಳಿಯಿಂದ ಪ್ರಚಾರ ಮುಗಿಸಿ ಬರುವಾಗ, ಅವರ ಕಾರನ್ನು ಹಿಂಬಾಲಿಸುತ್ತಿದ್ದ ಬೆಂಬಲಿಗರ ಕಾರಿನ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಕಲ್ಲು ತೋರಿ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿತ್ತು. ಅದಾದ ನಂತರ ದರ್ಶನ ಮನೆಯ ಘಟನೆ ಬೆಳಕಿಗೆ ಬಂದ ಕಾರಣ, ಈ ಪ್ರಕರಣಕ್ಕೆ ದ್ವೇಷ ರಾಜಕೀಯದ ಬಣ್ಣ ಬಳಿಯಲಾಗುತ್ತಿದೆ.

ಆದರೆ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಅಗೆದಷ್ಟೂ ಹೆಚ್ಚು ಸಂಶಯಗಳು ಹುಟ್ಟುಕೊಳ್ಳುತ್ತಿವೆ. ದರ್ಶನ್, ಕನ್ನಡದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ. ಅತ್ಯಂತ ಶ್ರೀಮಂತ ನಟ ಎಂದರೂ ತಪ್ಪಾಗುವುದಿಲ್ಲ. ಅಲ್ಲದೆ ಸಮಾಜದ ಒಬ್ಬ ಪ್ರಭಾವಶಾಲಿ ವ್ಯಕ್ತಿಯೂ ಹೌದು. ಅವರನ್ನು ಭೇಟಿ ಮಾಡಲು ನೂರಾರು ಜನ ಅಭಿಮಾನಿಗಳು ಮನೆಯ ಮುಂದೆ ಪ್ರತಿನಿತ್ಯ ಸಾಲುಗಟ್ಟಿರುತ್ತಾರೆ. ಇಂತಹ ಒಬ್ಬ ವ್ಯಕ್ತಿಯ ಮನೆ ಸಿಸಿ ಟಿವಿ ಕ್ಯಾಮೆರಾ ಕೆಟ್ಟು ಕುಂತರೂ ಅದನ್ನು ದುರಸ್ತಿ ಗೊಳಿಸುವುದಿಲ್ಲವೇ? ಅದರಲ್ಲೂ ಮನೆ ಮುಂದಿನ ದೃಶ್ಯಗಳನ್ನು ಸೆರೆಹಿಡಿಯಬೇಕಾದ ಮೂರೂ ಸಿಸಿಟೀವಿಗಳು ಕೆಟ್ಟು ಹೋಗಿದೆ ಎಂದರೆ ಅಷ್ಟು ಸುಲಭವಾಗಿ ನಂಬಲು ಅಸಾಧ್ಯ.

ನೆನ್ನೆ ನಿಖಿಲ್ ಅವರ ಬೆಂಬಲಿಗರ ಕಾರ್ ಗಾಜನ್ನು ಒಡೆದದ್ದು ದರ್ಶನ್ ಅಭಿಮಾನಿಗಳು ಎಂದು ತಿಳಿದುಬಂದಾಗ, ದರ್ಶನ್ ಜೆಡಿಎಸ್ ಪಕ್ಷದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಇದರಿಂದ ನಿಖಿಲ್ ಮೇಲೆ ಸಾಕಷ್ಟು ಅನುಕಂಪ ಮೂಡಿತು ಎಂಬುದು ನಿಜ. ಇದನ್ನು ಗಮನಿಸಿದ ಸುಮಲತಾ ಬೆಂಬಲಿಗರು, ಈ ಘಟನೆಯನ್ನು ದರ್ಶನ್ ರನ್ನು ಉಪಯೋಗಿಸಿಕೊಂಡು ಮರುಸೃಷ್ಠಿಸಲು ಪ್ರಯತ್ನಿಸಿದ್ದಾರ?
ಎಂಬುದು ಸಧ್ಯಕ್ಕೆ ಪ್ರತಿಯೊಬ್ಬರಿಗೂ ಕಾಡುತ್ತಿರುವ ಪ್ರಶ್ನೆ . ಏಕೆಂದರೆ, ಈ ಕೃತ್ಯ ಎಸಗಿದವರು ಸಹಜವಾಗಿಯೇ ಹಾನಿ ಮಾಡುವ ಉದ್ದೇಶದಿಂದ ಕೈ ಜೋಡಿಸಿರುತ್ತಾರೆ. ಆದರೆ ದರ್ಶನ್ ಮನೆ ಮೇಲೆ ಸಣ್ಣ ಪುಟ್ಟ ಹಾನಿಯಾಗಿದೆಯೇ ಹೊರೆತು, ದೊಡ್ಡದಾಗಿ ಕಂಡು ಬಂದಿಲ್ಲ.

ಏನೇ ಆಗಲಿ, ಇದೊಂದು ಚುನಾವಣಾ ಗಿಮಿಕ್ ಎಂದು ಅಧಿಕೃತವಾಗಿ ಸಾಬೀತಾದರೆ, ದರ್ಶನ್ ಹಾಗೂ ಸುಮಲತಾ ಇಬ್ಬರು ಜನರ ಕಣ್ಣಲ್ಲಿ ತೀರಾ ಕೆಲ ಮಟ್ಟಕ್ಕೆ ಹೋಗುತ್ತಾರೆ ಎಂಬುದು ನಿಷ್ಚಿತ.

Leave a Reply