ಅತೀ ಆಸೆ ಪಡಬಾರದು – ಸುಮಲತಾಗೆ ಟಾಂಗ ಕೊಟ್ಟ ಶಿವಣ್ಣ…!

ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ನಟ ದಿ.ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇತ್ತ ಜೆಡಿಎಸ್ ಪಕ್ಷದ ಪರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಕಣ್ಣಕ್ಕಿಳಿಯುತ್ತಿದ್ದು, ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ಸುಮಲತಾ ಅವರು ಸ್ಪರ್ಧಿಸುತ್ತಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ನಟ ಶಿವರಾಜ್ಕುಮಾರ್ ಅವರು ನಾನು ಸುಮಲತಾ ಅವರ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.

ನಮಗೆ(ಕಲಾವಿದರಿಗೆ) ಜನರು ಪ್ರೀತಿ ಅಭಿಮಾನ ನೀಡಿದ್ದಾರೆ. ನಾವು ವೇದಿಕೆ ಮೇಲೆ ಬಂದು ಒಂದು ಡೈಲಾಗ್ ಹೇಳಿದರೆ ಜನ ಶಿಳ್ಳೆ ಚಪ್ಪಾಳೆ ಹೊಡಿಯುತ್ತಾರೆ. ನಮಗೆ ಅಷ್ಟೇ ಸಾಕು. ಅತೀ ಆಸೆ ಪಡಬಾರದು ಎಂದು ಸುಮಲತಾ ಅವರಿಗೆ ಪರೋಕ್ಷವಾಗಿ ಟಾಂಗ ಕೊಟ್ಟಿದ್ದಾರೆ.

13 thoughts on “ಅತೀ ಆಸೆ ಪಡಬಾರದು – ಸುಮಲತಾಗೆ ಟಾಂಗ ಕೊಟ್ಟ ಶಿವಣ್ಣ…!

 1. Prakash hebri says:

  Ala kano sulemagne adhrali avru parokshavagi tang kotru antha hege helthiya

 2. ಕ್ರಿಶ್ಣ says:

  ಹಾಗಾದ್ರೆ ನಿನ್ನ ಹೆಂಡತಿ ಯಾಕೆ ರಾಜಕೀಯಕ್ಕೆ ಬಂದಿದ್ದು.ನೀನು ಅತಿ ಆಸೆ ಪಟ್ಟಿದ್ದೆಯ.ನಿಮಗೊಂದು ನ್ಯಾಯ ಸುಮಕ್ಕಗೊಂದು ನ್ಯಾಯನ

  1. ಕೋದಂಡರಾಂ says:

   ಅವರ ಪತ್ನಿ ರಾಜಕೀಯಕ್ಕೆ ಹೋಗಿದ್ರೂ ಅಣ್ಣಾವ್ರು ಪ್ರಚಾರಕ್ಕೆ ಹೋಗಿಲ್ಲೋ ಕ್ರಿಶ್ಣ

   1. Chandrashekar says:

    ಸುಮಲತಾ ಅಮ್ಮ ಚುನಾವಣೆಗೆ ನಿಂತಿರೇೂದು ಜನರಿಂದ ಜನರಿಗೇೂಸ್ಕರ ಮಂಡ್ಯದಲ್ಲಿ ಅಂಬರೀಶ್ ಅಪ್ಪಾಜಿ ಅಸ್ತಿತ್ವ ಉಳಿಯಲು ನಿಲ್ಲುವುದು ಅನಿವಾರ್ಯ ಯಾರಿಗೂ ಬೇಡ ಅನ್ನುವ ಅಧಿಕಾರ ಇಲ್ಲ…

  2. Lokesh raj says:

   Loffer Krishna they said about her. Not sumaltha u chappers don’t talks about Dr raj family

  3. shivanna helirode bere media akirode bere nivyakri ketdagi mathadodu thilkond maathadi yarinda shivanna ge enu agbeksgilla

  4. Anand Ganguly Ganguly says:

   ಹೆಂಡತಿ ಕಲಾವಿದೆ ಅಲ್ಲ

 3. Mallikarjun Choukashi Advocate says:

  ಶಿವಣ್ಣ ನಿನ್ನ ಹೆಂಡತೀನ ಇದೆ ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲಿಸಿದಾಗ ನಿನ್ನದು ಅತಿ ಆಸೆ ಆಗರಲಿಲ್ಲವಾ? ಕನಿಷ್ಠ ಪಕ್ಷ ನಿನ್ನ ತಮ್ಮಂದಿರೂ ಕೂಡ ನಿನ್ನ ಹೆಂಡತಿ ಪರವಾಗಿ ಪ್ರಚಾರ ಮಾಡಲು ಬರಲಿಲ್ವಲ್ಲ? ನಿಮ್ಮಪ್ಪ ರಾಜಕೀಯ ಮತ್ತು ಚುನಾವಣೆ ನಮ್ಮ ಕುಟುಂಬಕ್ಕೆ ಬೇಡ ಅಂದಿದ್ರಲ್ವಾ? ಪ್ರತಿ ಮಾತಿಗೂ ನಮ್ಮ ಅಪ್ಪಾಜಿ ಹೇಳತಿದ್ರೊ ಅನ್ನೊ ನೀನು ಅಪ್ಪಾಜಿ ಮಾತು ಮೀರಿ ಮಡದಿಯನ್ನ ಚುನಾವಣೆಗೆ ಏಕೆ ನಿಲ್ಲಿಸಿದೆ? ಇದು ನಿನ್ನ ಅತಿ ಆಸೆ ಅಧಿಕಾರದ ಹಪಹಪಿ ಅಲ್ಲ ಅಲ್ವೆ ಕಂದ?

 4. ಅತೀ ಆಸೆ ಪಡಬಾರದು – ಸುಮಲತಾಗೆ ಟಾಂಗ ಕೊಟ್ಟ ಶಿವಣ್ಣ…!
  🤣🤣🤣🤣🤣
  ಉರಿ ಅಂದ್ರೆ ಇದೆನಾ !!!

  1. Dr Raj family bagge yaru matha adbedi plz .

 5. MD.Aslam.S says:

  If shivanna has a ambition to enter the politics, he would have entered much before, but shivanna has no option to support his wife ambition, the result is we all know still suport shivanna who singlehandedly supported a women also his wife hatsoff shivanna, don’t blame, him or his family members pls…

 6. arthamadkond mathadi yak kitthadkond saytira

Leave a Reply