ಅಂಬರೀಷ್ ಅವರು ದೇವೇಗೌಡರ ಬಗ್ಗೆ ಮಾತನಾಡಿರುವ ಅಪೂರಪದ ವಿಡಿಯೋ…!

ಮಂಡ್ಯದ ಗಂಡು ಡಾ. ಅಂಬರೀಷ್ ಅವರು ನಮನ್ನು ಆಗಲಿ ಐದು ತಿಂಗಳಾಗುತ್ತಿದೆ. ಅಂಬರೀಷ್ ಅವರನ್ನು ಅಜಾತ ಶತ್ರು ಎಂದೇ ಕರಿಯಬಹುದು. ಏಕೆಂದರೇ ಪ್ರತಿಯೊಬ್ಬರೂ ಪ್ರೀತಿಸುವಂತಹ ಅಪೂರೂಪದ ವ್ಯಕ್ತಿತ್ವ ಅಂಬರೀಷ್ ಅವರದಾಗಿತ್ತು. ಅದೇ ರೀತಿ ಅಂಬರೀಷ್ ಹಾಗು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ವಿಶೇಷ ಬಾಂಧವ್ಯವಿತ್ತು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂದರೇ, ಕುಮಾರಸ್ವಾಮಿ ಅವರು ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು, ಕೇವಲ ತಮ್ಮ ಜವಾಬ್ದಾರಿಯಂತೆ ಮಾಡದೇ, ಸಹೃದಯದಿಂದ, ತನ್ನ ಸಹೋದರನಂತೆ ಭಾವಿಸಿ ರಾಜ ಮರ್ಯಾದಿಯಿಂದ ಯಾವುದೇ ಒಂದು ಸಣ್ಣ ಲೋಪ ದೋಷವಾಗದಂತೆ ನಡೆಸಿಕೊಟ್ಟಿದ್ದು.

ಆದರೆ ಈಗ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅದೇ ಕುಮಾರಸ್ವಾಮಿ ಅವರ ಕುಟುಂಬದ ಕುಡಿ, ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜಿದ್ದಾ ಜಿದ್ದಿಗೆ ಬಿದ್ದಿರುವುದು ವಿಪರ್ಯಾಸ.

ಆದರೆ ಅಂಬರೀಷ್ ಅವರು ಖಾಸಗಿ ವಾಹನಿಯ ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದಿಂದ ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಕೇವಲ ಇಬ್ಬರಲ್ಲಿ ಒಬ್ಬರಾದ, ಏಕೈಕ ಕನ್ನಡಿಗ ಹೆಚ್.ಡಿ ದೇವೇಗೌಡರ ಬಗ್ಗೆ ಮಾತನಾಡಿರುವ ಅಪರೂಪದ ವಿಡಿಯೋವೊಂದು ಇಲ್ಲಿದೆ.

Leave a Reply