ಒಬ್ಬ ಕಾಮುಕನನ್ನು ಹೇಗೆ ನಿಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಿರಿ? – ತೇಜಸ್ವಿ ಮಾಜಿ ಪ್ರೇಯಸಿ ಸೋಮ್ ದತ್ತ

ಬಿ.ಎಸ್ ಯಡಿಯೂರಪ್ಪ ಹಾಗು ಪಾಳಯದವರು ತಮ್ಮ ನೀಚತನದಿಂದ ಈಗ ನೆಲಕಚ್ಚಿಸಿರುವ, ಇಡೀ ದಕ್ಷಿಣ ಭಾರತದಲ್ಲೇ ಲೆಕ್ಕಕ್ಕೆ ಇಲ್ಲದ ಪಕ್ಷವಾದರೂ, ಕರ್ನಾಟಕದಲ್ಲಿ ಪ್ರಭಲವಾಗಿದ್ದ ಬಿಜೆಪಿ ಪಕ್ಷವನ್ನು ಬೆವರು ಸುರಿಸಿ ಕಟ್ಟಿದ ಅನಂತ್ ಕುಮಾರ್ ಅವರ ಪತ್ನಿಯಾದ, ತಮ್ಮ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ತೇಜಸ್ವಿನಿ ಅನಂತ್ಕುಮಾರ್ ರಂತಹ ಪ್ರಬುದ್ಧ, ಯೋಗ್ಯ ಅಭ್ಯರ್ಥಿಗೆ, ಟಿಕೆಟ್ ನೀಡದೆ ವಂಚಿಸಿ ತೇಜಸ್ವಿ ಸೂರ್ಯ ಎಂಬವರನ್ನು ಬೆಂಗಳೂರು ದಕ್ಷಣಿದ ಅಭ್ಯರ್ಥಿಯನ್ನಾಗಿ ಬಿಜೆಪಿ ಪಕ್ಷವು ಆಯ್ಕೆ ಮಾಡಿಕೊಂಡಿದೆ.

ಆದರೆ ತೇಜಸ್ವಿ ಸೂರ್ಯನ ನಿಜ ಬಣ್ಣವನ್ನು ಈಗ ಅವರ ಮಾಜಿ ಪ್ರೇಯಸಿ ಡಾ. ಸೋಮ್ ದತ್ತ ಅವರು ಬಯಲು ಮಾಡಿದ್ದಾರೆ. ಪ್ರಚಾರ ಮಾಡುವ ಮುನ್ನ ಒಬ್ಬ ವ್ಯಕ್ತಿಯ ಹಿನ್ನಲೆಯನ್ನು ತಿಳಿದುಕೊಂಡು ಮಾಡಿ. ತೇಜಸ್ವಿ ಸೂರ್ಯನಂತಹ ಕಾಮುಕ, ಹೆಂಗಸರನ್ನು ನಿಂದಿಸುವ, ಹೆಂಗಸರಿಗೆ ದೈಹಿಕ ಕಿರುಕುಳ ನೀಡುವ ವ್ಯಕ್ತಿಯನ್ನು ಹೇಗೆ ನೀವು ನಿಮ್ಮ (ಬಿಜೆಪಿ) ಅಭ್ಯರ್ಥಿಯಾಗಿ ಆಯ್ಕೆ ಮಾಡಿದಿರಿ? ಪ್ರತಿಯೊಬ್ಬ ಹಿಂದೂ ಧರ್ಮದವನು ಸಂಸ್ಕಾರವಂತನಾಗಿರುವುದಿಲ್ಲ. ಪ್ರತಿಯೊಬ್ಬ ಒಳ್ಳೆ ಭಾಷಣಕಾರನು ಒಳ್ಳೆ ವ್ಯಕ್ತಿಯಾಗಿರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನಂತರ, ನಾನು ಐದು ವರ್ಷಕ್ಕೂ ಹೆಚ್ಚು ಈತನ ಮೇಲಿನ ಕುರುಡು ಪ್ರೇಮದಿಂದ ನರಳಿದ್ದೇನೆ. ಈತನ ಮೊದಲನೇ ಬಲಿಪಶಿ ನಾನಲ್ಲ , ಕೊನೆಯವಳಂತೂ ಅಲ್ಲವೇ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಈ ಟ್ವೀಟ್ ಮಾಡಿದ ಕೆಲವೇ ಘಂಟೆಗಳಲ್ಲಿ, ಅವರ ಟ್ವಿಟರ್ ಖಾತೆ ಡಿಲೀಟ್ ಆಗಿದೆ. ಬಹುಷಃ, ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಬಣ್ಣ ಬಯಲು ಮಾಡಿದಕ್ಕೆ, ಸೋಮ್ ದತ್ತ ಅವರನ್ನು ಬೆದರಿಸಿ, ಅವರ ಅಕೌಂಟ್ ಡಿಲೀಟ್ ಮಾಡಿಸಿದ್ದಾರೆ ಎಂಬ ಸಂಶಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

Leave a Reply