ಸುಮಲತಾ ಬಿಜೆಪಿಯ ಒಂದು ಗಾಳವಷ್ಟೆ…!

ಇಂಗ್ಲೀಷ್ ನಲ್ಲಿ ಒಂದು ಮಾತಿದೆ, ಪಾಲಿಟಿಕ್ಸ್ ಇಸ್ ನಾಟ್ ಆಲ್ವೇಸ್ ಅಬೌಟ್ ವಿನ್ನಿಂಗ್ ಅಂತ. ಅಂದರೇ, ರಾಜಕೀಯದಲ್ಲಿ ಸದಾ ಗೆಲ್ಲುವುದೇ ಧ್ಯೇಯವಲ್ಲ ಎಂದು. ಕೆಲವೊಮ್ಮೆ ಎದುರಾಳಿಯನ್ನು ಸೋಲಿಸಲು, ಎಂತಹ ಮಟ್ಟಕ್ಕಾದರೂ ಇಳಿಯಲು ರಾಜಕೀಯದವರು ಸಿದ್ಧರಾಗಿರುತ್ತಾರೆ ಎಂಬುದಕ್ಕೆ ಮಂಡ್ಯ ಚುನಾವಣೆಯೇ ಸಾಕ್ಷಿ.

ಮಂಡ್ಯ ಜಿಲ್ಲೆ, ಜೆಡಿಎಸ್ ಪಕ್ಷವು ಹಲವು ವರ್ಷಗಳಿಂದ ಬೆವರು ಸುರಿಸಿ, ಶ್ರಮಿಸಿ ನಿರ್ಮಿಸಿರುವ ಭದ್ರಕೋಟೆ. ಸಿನಿಮಾ ನಾಯಕರ ಚಿತ್ರವನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಮಂಡ್ಯದಲ್ಲಿ 1000ದಲ್ಲಿ ಒಬ್ಬ ವ್ಯಕ್ತಿಯ ಕೈ ಮೇಲೆ ಜೆಡಿಎಸ್ ನಾಯಕರ ಹಚ್ಚೆ ಇರುತ್ತದೆ.

ಈಗ ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ನಿಂದ ಕಿತ್ತುಕೊಳ್ಳಲು, ಬಿಜೆಪಿ ಕುತಂತ್ರವೊಂದನ್ನು ರೂಪಿಸಿಕೊಂಡಿದೆ. ಚುನಾವಣೆ ಅಖಾಡದಲ್ಲಿ ಇಳಿದು, ಮಂಡ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸುವುದು ಕನಸಿನಲ್ಲೂ ಸಾಧ್ಯವಿಲ್ಲ ಎಂಬುದು ಬಿಜೆಪಿ ಪಕ್ಷಕ್ಕೆ ಬಹಳ ಚೆನ್ನಾಗಿ ಗೊತ್ತಿದೆ. ಹೀಗಾಗಿ ಸುಮಲತಾ ಅವರನ್ನು ಬಿಜೆಪಿ ತನ್ನ ಒಂದು ಗಾಳವನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ.

ಮಂಡ್ಯ ಜನತೆ ಕುಮಾರಸ್ವಾಮಿ ಹಾಗು ದೇವೇಗೌಡರನ್ನು ಬಿಟ್ಟರೆ, ಇಷ್ಟರ ಮಟ್ಟಿಗೆ ಹಚ್ಚಿಕೊಂಡಿರುವುದು ಅಂಬರೀಷ್ ಅವರನ್ನು ಮಾತ್ರ. ಅದೇ ಪ್ರೀತಿಯಿಂದ ಮೂರು ಬಾರಿ ಅಂಬರೀಷ್ ಅವರನ್ನು ಸಂಸದರನ್ನಾಗಿ ಮಾಡಿದರು. ಆದರೆ ಅಂಬರೀಷ್ ಅವರು ಗೆದ್ದಮೇಲೆ ಮಂಡ್ಯ ಕಡೆ ತಲೆ ಹಾಕಿ ಕೂಡ ಮಲಗುತ್ತಿರಲಿಲ್ಲ ಎಂಬ ಬೇಸರ ಮಂಡ್ಯದ ಜನತೆಗೆ ಇಂದಿಗೂ ಇದೆ. ಪ್ರಜ್ಞಾವಂತ ಮತದಾರರ ಮನಸಿನಲ್ಲಿ ಈ ಕೊರಗು ಇನ್ನು ಹಾಗೆ ಇದ್ದರೂ, ಮಿಕ್ಕ ಜನರಲ್ಲಿ ಮನೆ ಮಾಡಿರುವ ಅಭಿಮಾನದ ಅತಿರೇಕ ಈ ಸಂಗೀತಯನ್ನು ಮರೆ ಮಾಚಿದೆ.

ಅಂಬರೀಷ್ ಅವರ ನಿಧನ, ಎಲ್ಲರಿಗೂ ದುಃಖದ ಸಂಗತಿಯಾಗಿರಲಿಲ್ಲ. ಬಿಜೆಪಿ ನಾಯಕರಿಗೆ ಅವಕಾಶದ ಬಾಗಿಲು ತೆರೆದು ಕೊಂಡಂತಾಯಿತು. ಅಂಬಿ ನಿಧನದ ವಿಷಯವನ್ನು ಒಂದು ಭಾವನಾತ್ಮಕ ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು, ಅಂಬಿಯ ಅಂತ್ಯಕ್ರಿಯೆಯನ್ನು ಕೇವಲ ಜವಾಬ್ದಾರಿಯಂತೆ ನೋಡದೆ, ಸಹೃದಯದಿಂದ ಯಾವುದೇ ಒಂದು ಕುಂದು ಕೊರತೆ ಕಾಡದಂತೆ ಸುಗಮವಾಗಿ ರಾಜ ಮರ್ಯಾದಿಯಿಂದ ನಡೆಸಿಕೊಟ್ಟ ಕುಮಾರಸ್ವಾಮಿ ಅವರ ಮಗನ ವಿರುದ್ಧವೇ ಅಂಬಿ ಪತ್ನಿ ಸುಮಲತ್ರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೇರೇಪಿಸಿದ್ದಾರೆ.

ಈಗ ಸುಮಲತಾ ಬಿಜೆಪಿಯ ಒಂದು ಗಾಳವಷ್ಟೇ. ಇಷ್ಟೆಲ್ಲ ಯೋಚನೆ ಮಾಡಿರುವ ಬಿಜೆಪಿ ಪಕ್ಷದವರು, ಯಾಕೆ ತಮ್ಮ ಪಕ್ಷದಿಂದ ಸುಮಲತಾ ಅವರಿಗೆ ಚುನಾವಣಾ ಟಿಕೆಟ್ ನೀಡಲಿಲ್ಲ ಎಂದು ನೀವು ಯೋಚಿಸುತ್ತಿರಬಹುದು. ಇದಕೆ ಕಾರಣವಿಷ್ಟೇ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಮುಂದೆ ಬಿಜೆಪಿ ಒಬ್ಬ ವೃದ್ದನಷ್ಟೆ ದುರ್ಬಲ. ಈ ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿದರೂ, ಮಂಡ್ಯ ಜನತೆ ಮುಲಾಜಿಲ್ಲದೆ ನಿರ್ಲಕ್ಷಿಸುತ್ತಾರೆ.

ಆದ್ದರಿಂದ ಸುಮಲತಾ ಅವರಿಗೆ ಪರೋಕ್ಷವಾಗಿ ಬೆಂಬಲಿಸಿ, ನಂತರ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಒಂದು ಯೋಜನೆಯಲ್ಲಿದ್ದಾರೆ. ಆದರೆ ಸುಮಲತಾ ಅವರೇ ಹೇಳಿದಂತೆ, ಮಂಡ್ಯ ಜನರು ಮುಗ್ದರಿರಬಹುದು, ಆದರೆ ಮುಠ್ಠಾಳರಲ್ಲ.

Leave a Reply