ದೇವೇಗೌಡರನ್ನು ಅವಹೇಳನೆ ಮಾಡಿದ ಅಭಿಷೇಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ…!

ಮಂಡ್ಯ ಲೋಕ ಸಭಾ ಚುನಾವಣೆಯ ರಣಕಣ ದಿನೇ ದಿನೇ ರಂಗೇರುತ್ತಿದ್ದು, ಎರಡೂ ಸ್ಪರ್ಧಿಗಳ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಕಾರ್ಯ ಜೋರಾಗಿ ನಡೆಸುತ್ತಿದ್ದಾರೆ. ಇತ್ತ ಸುಮಲತಾ ಅವರು, ಸಿನಿ ದುನಿಯಾದ ಸ್ಟಾರ್ ಹಾಗು ಅಂಬರೀಷ್ ಅಭಿಮಾನಿಗಳನ್ನು ನಂಬಿಕೊಂಡಿದ್ದರೆ, ನಿಖಿಲ್ ಕುಮಾರಸ್ವಾಮಿ ನಮ್ಮ ಕಾರ್ಯಕರ್ತರೇ ನಮಗೆ ಸ್ಟಾರ್ ಗಳು ಇದ್ದಹಾಗೆ, ಅವರೇ ನಮ್ಮ ಸೈನಿಕರು ಎಂದು ಪ್ರಚಾರದಲ್ಲಿ ಮುನ್ನುಗುತ್ತಿದ್ದು, ಕುಮಾರಸ್ವಾಮಿ ಹಾಗು ದೇವೇಗೌಡರು ಮಂಡ್ಯಕ್ಕೆ ನೀಡಿರುವ ಕೊಡುಗೆಯನ್ನು ತಮ್ಮ ಪ್ರಚಾರದ ಆಸ್ತ್ರವಾಗಿಸಿಕೊಂಡಿದ್ದಾರೆ.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ, ಸುಮಲತಾ ಅವರ ಪುತ್ರ ಅಭಿಶೇಷ್ ಗೌಡ ಪ್ರಚಾರ ಮಾಡುವ ಬರದಲ್ಲಿ ದೇವೇಗೌಡರನ್ನು ಅವಹೇಳಿಸಿದ್ದಾರೆ. ಅವರು ಅವಹೇಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇವೇಗೌಡರಂತ ಹಿರಿಯ ನಾಯಕರನ್ನು ಅವಹೇಳಿಸುತ್ತೀಯಾ ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೇಗೆ ಹಲವಾರು ನಾಯಕರು, ಅವರು ಎಷ್ಟೇ ಒಳ್ಳೆ ಅಭ್ಯರ್ಥಿಯಾಗಿದ್ದರು, ದೇವೇಗೌಡರನ್ನು ಅವಹೇಳಿಸಿದಕ್ಕೆ ಜನರಿಂದ ಛೀಮಾರಿ ಹಾಕಿಸಿಕೊಂಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿ, ಇಂದಿಗೂ ತಲೆ ಎತ್ತಲು ಕಷ್ಟ ಪಡುತ್ತಿರುವ ಉದಾಹರಣೆ ಸಾಕಷ್ಟು ಇದೆ.

Leave a Reply