ಸುಮಲತಾರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಚುನಾವಣಾ ಅಧಿಕಾರಿ…!

ಅಲ್ಲಾ ಸ್ವಾಮಿ ದೇವೇಗೌಡರು ಮೊದಲನೇ ಬಾರಿ ನಾಮಪತ್ರಿ ಸಲ್ಲಿಸಿದಾಗ, ಸುಮಲತಾ ಅವರಿನ್ನೂ ಹುಟ್ಟೇ ಇರಲಿಲ್ಲ, ಅಂತದ್ದರಲ್ಲಿ ದೇವೇಗೌಡರ ಕುಟುಂಬದವರಿಗೆ ನಾಮಪತ್ರ ಸಲ್ಲಿಸಲು ಬರುವುದಿಲ್ಲ ಎಂದು ಟೀಕಿಸುತ್ತಾರಲ್ಲ ಇವರು, ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಸುಮಲತಾರನ್ನು ಅಪಹಾಸ್ಯ ಮಾಡುತ್ತಿದ್ದರೆ, ಸುಮಲತಾರವರು ನಿಖಿಲ್ ನಾಮಪತ್ರದ ಕುರಿತು ಮಾಡಿರುವ ಆಧಾರವಿಲ್ಲದ ಆರೋಪಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಜೆಡಿಎಸ್ – ಕಾಂಗ್ರೆಸ್ ಮಂಡ್ಯ ಲೋಕಸಭಾ ಚುನಾವಣಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರದ ಸಿಂಧುತ್ವದ ಬಗ್ಗೆ ಮಾಡಿದ ಆರೋಪಕ್ಕೆ ಯಾವುದೇ ತಿರುಳಿಲ್ಲ ಎಂದು ಮುಖ್ಯ ಕೇಂದ್ರ ಚುನಾವಣಾ ಆಯೋಗ ಅಧಿಕಾರಿ ಸುಮಲತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರು, ಸುಮಲತಾ ಅವರ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ, ನಿಖಿಲ್ ನಾಮಪತ್ರ ವಿವಾದ ಮುಗಿದ ಅಧ್ಯಾಯ, ಸ್ಪರ್ಧೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

Leave a Reply