ಹೌದು ನಾವು ನಾಯ್ಡುಗಳೇ ಏನ್ ಇವಾಗ? ಮಂಡ್ಯದಲ್ಲಿ ನಾಯ್ಡುಗಳು ಗೆಲ್ಲಬಾರದ? – ನಟ ದರ್ಶನ್

ಇಡೀ ಇಂಡಿಯವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಮಂಡ್ಯ ಲೋಕ ಸಭಾ ಕ್ಷೇತ್ರದ ರೋಚಕ ಫಲಿತಾಂಶಕ್ಕೆ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಮಂಡ್ಯದಲ್ಲಿ 22 ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದರೂ, ಎಲ್ಲರ ಚಿತ್ತ ಆ ಇಬ್ಬರು ಅಭ್ಯರ್ಥಿಗಳತ್ತ ಮಾತ್ರ. ಒಬ್ಬರು ಪಕ್ಷದ ನಾಯಕರು ಈ ಹಿಂದೆ ಮಂಡ್ಯ ಜಿಲ್ಲೆಗೆ ನೀಡಿರುವ ಅಪಾರ ಕೊಡುಗೆಯನ್ನು ಅಸ್ತ್ರವಾಗಿ ಬಳಸುತ್ತಿರುವ ನಿಖಿಲ್ ಕುಮಾರಸ್ವಾಮಿ ಹಾಗು ತಮ್ಮ ಪತಿಯ ಜನಪ್ರಿಯತೆಯನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿರುವ ಸುಮಲತಾ ಅಂಬರೀಷ್ ಅವರು.

ಉಭಯ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮಂಡ್ಯದ ಲೋಕ ಸಭಾ ಕ್ಷೇತ್ರದ ಗಲ್ಲಿ ಗಲ್ಲಿಗಳಲ್ಲಿ ಸಮಯ ವ್ಯರ್ತ ಮಾಡದೆ ಬಿರುಸಿನ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.

ಸುಮಲತಾ ಪರ ಪ್ರಚಾರ ಮಾಡಲು ಬಂದ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರು ಇಂದು ಖಾಸಗಿ ವಾಹಿನಿಯ ಪತ್ರಕರ್ತನೊಂದಿಗೆ ಮಾತನಾಡುತ್ತಿರುವಾಗ, ” ಹೌದು ಅವು ನಾಯ್ಡುಗಳು ನಿಜ. ಅದಕ್ಕೆ ಏನ್ ಇವಾಗ? ಯಾಕೆ ಮಂಡ್ಯದಲ್ಲಿ ನಾಯ್ಡುಗಳು ಗೆಲ್ಲಬಾರದೇ?” ಎಂದು ಪ್ರಶ್ನಿಸಿದ್ದಾರೆ.

ಗೌಡರ ಗತ್ತನ್ನು ಇಡೀ ಊರಿಗೆ ಗೊತ್ತು ಮಾಡಿಕೊಟ್ಟಿರುವ ಮಂಡ್ಯದಲ್ಲಿ ಈ ಹೇಳಿಕೆಯಿಂದ ಸುಮಲತಾ ಅವರ ಮೇಲೆ ಯಾವ ಪರಿಣಾಮ ಬೀಳುತ್ತದೆ ಎಂದು ಕಾದು ನೋಡಬೇಕಿದೆ.

One thought on “ಹೌದು ನಾವು ನಾಯ್ಡುಗಳೇ ಏನ್ ಇವಾಗ? ಮಂಡ್ಯದಲ್ಲಿ ನಾಯ್ಡುಗಳು ಗೆಲ್ಲಬಾರದ? – ನಟ ದರ್ಶನ್

  1. ಚಂದ್ರಶೇಖರ್ says:

    ನಮ್ಮ ಮಂಡ್ಯದ ಜನತೆ ಹಾಗೂ ಒಕ್ಕಲಿಗರು ಒಂದಾಗಿ ನಿಂತರೇ ಏನಾಗುತ್ತೆ ಅಂತಾ ಕಳೆದ ಚುನಾವಣೆಯಲ್ಲಿ ಸಾಬೀತುಪಡಿಸಿದ್ದೇವೆ,ಈಗ ಮತ್ತೊಮ್ಮೆ ತೋರಿಸಿ

Leave a Reply