ಮಾರ್ಗ ಮದ್ಯೆ ಕಾರು ನಿಲ್ಲಿಸಿ ಪುಟ್ಟ ಬಾಲಕಿಯ ಕಷ್ಟವನ್ನು ಆಲಿಸಿದ ಸಿಎಂ…!

ಕಷ್ಟ ಎಂದು ಕೈಚಾಚಿ ಬಂದವರಿಗೆ ಎಂದೂ ಸಹಾಯ ನಿರಾಕರಿಸದ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ, ಒಂದು ಪುಟ್ಟ ಹುಡುಗಿಯ ಪೋಷಕರು, ಸಿಎಂರನ್ನು ಭೇಟಿ ಮಾಡಿ ಸಹಾಯ ಕೇಳಲು ಕಾಯುತ್ತಿದವರ ಕಷ್ಟವನ್ನು ಆಲಿಸಿ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗಾಗಿ ಅನಾರೋಗ್ಯಪೀಡಿತ ತಂದೆ-ತಾಯಿ ಕಾದು ಕುಳಿತ್ತಿದ್ದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಕಾರು ನಿಲ್ಲಸಿ ತಮಗಾಗಿ ಕಾದು ಕುಳಿತಿದ್ದ ಪೋಷಕರ ಕಷ್ಟವನ್ನು ಆಲಿಸಿದ್ದಾರೆ.

ಸಭೆ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಕಾದುನಿಂತಿದ್ದ ಮಗುವಿನ ಪೋಷಕರನ್ನು ಸಿಎಂ ಕುಮಾರಸ್ವಾಮಿ ಕಾರು ನಿಲ್ಲಿಸಿ ಅವರ ಕಷ್ಟ ಆಲಿಸಿದ್ದಾರೆ. ಆಗ ಮಗುವಿನ ಅನಾರೋಗ್ಯದ ಬಗ್ಗೆ ಸಿಎಂ ಬಳಿ ದಂಪತಿ ಹೇಳಿಕೊಂಡಿದ್ದರು. ನಂತರ ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ.

ಅಷ್ಟೇ ಅಲ್ಲದೇ ನಾಳೆ (ಮಂಗಳವಾರ) ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದು ಭೇಟಿ ಮಾಡುವಂತೆ ಪೋಷಕರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ನಂತರ ಕೆಆರ್‍ಎಸ್‍ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆಯೂ ಕೂಡ ಸಿಎಂ ಕುಮಾರಸ್ವಾಮಿ ಅವರು ಹೂ ಮಾರಾಟ ಮಾಡುತ್ತಿದ್ದ ಬಾಲಕಿಯ ಬಳಿ ಕಾರು ನಿಲ್ಲಿಸಿ ಮಾತನಾಡಿಸಿದ್ದರು.

Leave a Reply