ಹಬ್ಬದ ದಿನ ಮಹಿಳಾ ಪೊಲೀಸರಿಗೆ ಕಣ್ಣೀರು ಹಾಕಿಸಿದ ಸುಮಲತಾ…!

ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ಅವರು ಹಬ್ಬದ ದಿನವೇ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದ್ದಾರೆ.

ಹಬ್ಬದ ದಿನವೂ ಪ್ರಚಾರಕ್ಕೆ ಇಳಿದಿದ್ದ ಸುಮಲತಾ ಅವರು, ಬೆಳಗ್ಗಿನಿಂದ ಒಂದೇ ಸಮನೆ ರಾತ್ರಿಯ ತನಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಇವರಿಗೆ ರಕ್ಷಣೆ ನೀಡಲು ಪೊಲೀಸರನ್ನು ನೇಮಕ ಮಾಡಲಾಗಿತ್ತು.

ಹಬ್ಬದ ದಿನವೂ ಕುಟುಂಬದ ಜೊತೆ ಕಾಲ ಕಳೆಯಲು, ಗಂಡ- ಮಕ್ಕಳ ಜೊತೆ ಕೂತು ಒಂದು ಹೊತ್ತು ಊಟ ಮಾಡಲು ಸಾಧ್ಯವಾಗಲಿಲ್ಲ ಎಂದು ಮಹಿಳಾ ಪೊಲೀಸರು ಕಣ್ಣೀರು ಇಡುತ್ತಿದ್ದರು. ಇದನ್ನು ಗಮನಿಸಿದ ಇನ್ಸ್ ಪೆಕ್ಟರ್ ಐಯಣ್ಣಗೌಡ ಅವರು, ಹತ್ತು ಮುಕ್ಕಾಲು ಆಯ್ತು ಏನ್ ಆಟ ಆಡುತ್ತಿದ್ದೀರಾ. ಬೆಳಗ್ಗೆಯಿಂದ ಒಂದು ತುತ್ತು ಅನ್ನ ತಿಂದಿಲ್ಲ ಗೊತ್ತಾ? ಎಂದು ಹಬ್ಬದ ದಿನವೂ ಮಹಿಳಾ ಪೊಲೀಸರು ಕಣ್ಣೀರು ಹಾಕಿಕೊಂಡು ಹೋಗಿದ್ದಾರೆ. ಟೈಮ್ ಎಷ್ಟು ಗೊತ್ತಾ? ಪ್ರಚಾರ ಸಾಕು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಂಡರು.

ಇನ್ಸ್ ಪೆಕ್ಟರ್ ಅವಾಜ್‍ಗೆ ಬೆಚ್ಚಿ ಪ್ರಚಾರ ವಾಹನದಿಂದ ಕೂಡಲೇ ಸುಮಲತಾ ಅವರು ಕೆಳಗಿಳಿದಿದ್ದಾರೆ. ಈ ವೇಳೆ ಅಭಿಮಾನಿಗಳಿಂದ ತಳ್ಳಾಟ ನೂಕಾಟ ಆಗಿದೆ. ಕೊನೆಗೆ ನೀತಿ ಸಂಹಿತೆಗೆ ಬೆದರಿ ಸುಮಲತಾ ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.

Leave a Reply