ಕರ್ನಾಟಕದಲ್ಲಿ ಬಿಜೆಪಿಗೆ “ಮೋದಿ” ಹೆಸರೇ ಮುಳುವಾಗುತ್ತಿದೆಯೇ …?!

ಐನೂರ ನಲವತ್ತು ಮೂರು ಲೋಕ ಸಭಾ ಕ್ಷೇತ್ರಗಳು. ಒಂದು ಬೃಹತ್ ರಾಷ್ಟೀಯ ಪಕ್ಷ. ಐನೂರ ನಲವತ್ತು ಅಭ್ಯರ್ಥಿಗಳು. ಅದೊಂದೇ ಮಂತ್ರ. ಅದೊಂದೇ ಅಸ್ತ್ರ. ನರೇಂದ್ರ ಮೋದಿ ಹೆಸರು. ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರೀಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಬಿಜೆಪಿ ಪಕ್ಷಕ್ಕೆ ಮತ ಬೇಡಲು ಆ ಒಂದು ಹೆಸರು ಬಿಟ್ಟರೆ ಬೇರೇನೂ ಯೋಗ್ಯ ಅಂಶಗಳಿಲ್ಲ ಎಂಬುದು ವಿಪರ್ಯಾಸವಲ್ಲದೇ ಮತ್ತೇನು? ಆದರೆ ಈಗ ಆ ಒಂದು ಹೆಸರೇ ಕರ್ನಾಟಕದಲ್ಲಿ ಬಿಜೆಪಿಗೆ ಮಾರಕವಾಗುತ್ತಿದೆ ಎಂದರೆ ಸುಳಲ್ಲ. ಅದು ಹೇಗೆ? ಮುಂದೆ ಓದಿ…

ಐದು ವರ್ಷದ ಹಿಂದೆ, ಇದೇ ರೀತಿ, ಬಿಜೆಪಿ ಪಕ್ಷದ ನಾಯಕರು, ಆ ಒಬ್ಬ ವ್ಯಕ್ತಿಯ ಹೆಸರು ಹೇಳಿ ಮತ ಗಿಟ್ಟಿಸಿಕೊಂಡಿದ್ದರು. ಆದರೆ ಅದರ ಪ್ರತಿಪಫಲವಾಗಿ ನಮಗೆ ಸಿಕ್ಕಿರುವುದು ಕೇವಲ ಸುಳ್ಳು ಆಮಿಷಗಳು, ಅಪೂರ್ಣ ಭರವಸೆಗಳು ಹಾಗು ಮೋಸ ಹೋದ ಹತಾಶಾ ಭಾವನೆ. ಬಿಜೆಪಿಯ ಮತ್ತೊಂದು ಟ್ರಂಪ್ ಕಾರ್ಡ್ ಎಂದರೆ ‘ಹಿಂದುತ್ವ’. ಪ್ರಪಂಚವಿಡೀ ಕೊಂಡಾಡುವಂತಹ ಮೌಲ್ಯವುಳ್ಳ ಒಂದು ಧರ್ಮವನ್ನು, ಒಂದು ಪಕ್ಷ ರಾಜಕೀಯವಾಗಿ ದುರ್ಬಳಿಕೆ ಮಾಡುತ್ತಿರುವುದು ಹಾಗು ಅವರ ಬೆಂಬಲಿಗರು ಅದನ್ನು ಸಮರ್ಥನೆ ಮಾಡುತ್ತಿರುವುದು ನಮ್ಮ ದುರ್ಧೈವ ಎಂದರೆ ತಪ್ಪಾಗುವುದಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ನಾಯಕರ ವೈಫಲ್ಯದಿಂದ ಕುಸಿಯುತ್ತಿರುವ ಕಟ್ಟಡವಾಗಿದೆ. ಆದ್ದರಿಂದ, ಪ್ರತಿಯೊಬ್ಬ ಅಭ್ಯರ್ಥಿಯೂ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಇದೆ ಈಗ ಬಿಜೆಪಿ ಪಕ್ಷಕ್ಕೆ ಮುಳುವಾಗುವಂತಿದೆ. ಏಕೆಂದರೆ ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಯೂ ಮೋದಿ ಹೆಸರಿನಲ್ಲಿ ಮತ ಕೇಳಬೇಕು ಎಂದರೆ, ಅವರಿಗೆ ಗೆಲ್ಲಲು ಅರ್ಹತೆಯಾದರೂ ಏನಿದೆ ಎಂಬುದು ಪ್ರತಿಯೊಬ್ಬರೂ ಮತ ಚಲಾಯಿಸುವ ಮುನ್ನಾ ಗಂಭೀರವಾಗಿ ಯೋಚಿಸಬೇಕಾದ ಸಂಗತಿ.

Leave a Reply