ಸಮರ್ಥ ಸಾರಥಿ ವಾಸಣ್ಣ; ಲೋಕಸಭೆಗೆ ಮಣ್ಣಿನ‌ಮಗ…!

ಕುರುಕ್ಷೇತ್ರ ಮಹಾಯುದ್ಧದಲ್ಲಿ ಶ್ರೀ ಕೃಷ್ಣ ಹೇಗೆ ಅರ್ಜುನನ ರಥದ ಸಾರಥ್ಯವಹಿಸಿ, ದುಷ್ಟ ಕುರುವಂಶಸ್ಥರನ್ನು ಮಟ್ಟ ಹಾಕುವುದಕ್ಕೆ ರೂವಾರಿಯಾದನೋ, ಹನುಮಂತನು ಹೇಗೆ ರಾಮನ ಬಲಗೈ ಬಂಟನಾಗಿ, ಅವನ ಬೆನ್ನಿಗೆ ನಿಂತು ಮಹಾರಾಕ್ಷಸನಾದ ರಾವಣನನ್ನು ಸಂಹಾರ ಮಾಡುವಲ್ಲಿ ಮುಖ್ಯಪಾತ್ರವಹಿಸಿದನೋ, ಅದೇ ರೀತಿ ಲೋಕ ಸಭಾ ಚುನಾವಣಾ ಸಮರದಲ್ಲಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತುಮಕೂರಿನ ಕೋಮುವಾದಿ ಪಕ್ಷದ ಅಭ್ಯರ್ಥಿಯನ್ನು ಸಡ್ಡು ಹೊಡೆಯಲು ಸಾಥ್ ನೀಡಿದ್ದಾರೆ.

ಲೋಕ ಸಭಾ ಚುನಾವಣೆ ಘೋಷಣೆಯಾದ ಸಮಯದಿಂದಲೂ ಜೆಡಿಎಸ್ ಪಕ್ಷದ ವರಿಷ್ಠ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅಂತಿಮವಾಗಿ ಅವರು ತುಮಕೂರು ಲೋಕ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಎಂದು ತೀರ್ಮಾನವಾದ ಕ್ಷಣದಿಂದಲೇ ಎಸ್. ಆರ್ ಶ್ರೀನಿವಾಸ್ ಅವರು ದೇವೇಗೌಡರನ್ನು ಗೆಲ್ಲಿಸದಿದ್ದರೆ ತಮ್ಮ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಮೀಸೆ ತಿರುವಿ ಸಿದ್ದರಾದರು.

ಅಷ್ಟೇ ಅಲ್ಲದೆ ಶ್ರೀನಿವಾಸ್ ಅವರ ಮಡದಿ ಭಾರತಿ ಶ್ರೀನಿವಾಸ್ ಹಾಗು ಉದಯೋನ್ಮುಖ ಯುವ ನಾಯಕರಾದ ಅವರ ಪುತ್ರ ದುಷ್ಯಂತ್ ಶ್ರೀನಿವಾಸ್ ಕೂಡ ದೇವೇಗೌಡರ ಗೆಲುವಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಹೇಮಾವತಿ ವರಪುತ್ರ ದೇವೇಗೌಡರಿಗೆ ತುಮುಕೂರಿನಲ್ಲೂ ಬಾರಿ ಜನ ಬೆಂಬಲವಿರುವುದರಿಂದ, ಮತ್ತೆ ಮಣ್ಣಿನ ಮಗ ಕನ್ನಡಿಗರ ಧ್ವನಿಯಾಗಿ ಗುಡುಗಲು ದೆಹಲಿಯ ಲೋಕ ಸಭೆಯತ್ತ ಹೆಜ್ಜೆ ಹಾಕುವುದು ಖಚಿತ ಎಂದು ಹೇಳಲಾಗುತ್ತಿದೆ.

Leave a Reply