ಮೋದಿ ರೋಡ್ ಶೋಗಾಗಿ ಒಂದೂವರೆ ಲಕ್ಷ ಲೀಟರ್ ಕುಡಿಯುವ ನೀರು ಸುರಿದು ರಸ್ತೆ ಸ್ವಚ್ಛ ಮಾಡಿದಕ್ಕೆ ಬಾರಿ ಟೀಕಿ…!

ಅವಧಿಗೂ ಮುನ್ನವೇ ಕಾಲಿಟ್ಟಿರುವ ಬೇಸಿಗೆಯಿಂದ ಬಿರು ಬಿಸಿಲಿಗೆ ಕಾಂಕ್ರೀಟ್‌ ಕಾಡಾಗಿರುವ ಭಾರತ ದೇಶದಲ್ಲಿ ಮನುಷ್ಯರು ಮಾತ್ರವಲ್ಲದೆ, ಪ್ರಾಣಿ – ಪಕ್ಷಿಗಳು ಬಸವಳಿಯುತ್ತಿವೆ. ಹನಿ ನೀರನ್ನು ಅಮೂಲ್ಯವಾಗಿ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ, ಒಂದೂವರೆ ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿಯ ರೋಡ್ ಶೋಗಾಗಿ ರಸ್ತೆಯನ್ನು ಸ್ವಚ್ಛ ಮಾಡಲಾಯಿತು.

ನರೇಂದ್ರ ಮೋದಿ ನೆನ್ನೆ ವಾರಾಣಸಿಯ ಬನಾರಸ್ ನ ಹಿಂದೂ ಯೂನಿವರ್ಸಿಟಿನಿಂದ ದಶಾಶ್ವಮೇಧ ಘಾಟ್ ನ ವರೆಗೂ ಸುಮಾರು 7 ಕಿ.ಮೀ ರೋಡ್ ಶೋ ನಡೆಸಿದರು. ಇದಕ್ಕಾಗಿ ಮುಂಜಾನೆ ಮೋದಿ ಬರುವ ಮುನ್ನವೇ ಬರೋಬ್ಬರಿ ಒಂದೂವರೆ ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಬಳಸಿ ರಸ್ತೆಯನ್ನು ತೊಳೆಯಲಾಯಿತು. ಇದು ಸಾಮಾಜಿಕ ಜಾಲತಾಣಗಲ್ಲಿ ಬಾರೀ ಟೀಕೆಗೆ ಗುರಿಯಾಗುವಂತೆ ಮಾಡಿದ.

ಎಷ್ಟೋ ಕಡೆ ಕುಡಿಯಲು ನೀರಿಲ್ಲದೆ ಜನ ಪರದಾಡುತ್ತಿದ್ದಾರೆ, ಲಕ್ಷಾಂತರ ರೈತರ ಹೊಲ-ಗದ್ದೆಗಳು ನೀರಿಲ್ಲದೆ ಬರಡಾಗಿವೆ, ಪ್ರಾಣಿ ಪಕ್ಷಿಗಳ ಒದ್ದಾಡುತ್ತಿದ್ದಾರೆ. ಇಂತ ಸಂದರ್ಭದಲ್ಲಿ ನೀರನ್ನು ಹಾಲು ಮಾಡುವವನು ಇಂತಹ ಮೂರ್ಖನಿರಬಹುದು ಎಂದು ಕಟುವಾಗಿ ಟೀಕಿಸಲಾಗುತ್ತಿದೆ.

Leave a Reply