ದರ್ಶನ್ ಇನ್ನು ಎಳಸು, ತಿಳುವಳಿಕೆ ಇಲ್ಲದೇ ಹೀಗೆ ಮಾತನಾಡುತ್ತಾರೆ – ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ರಾಜಕೀಯ ಭರಾಟೆಯಲ್ಲಿ ಏನುಮಾತನಾಡುತ್ತಿದ್ದೇನೆ, ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಯೋಚಿಸಿದ, ಹದಿ ಹರಿಯದ ಯುವಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಕೊಳ್ಳಲು ನಟ ದರ್ಶನ್ ಹಲವಾರು ಹೇಳಿಕೆಗಳನ್ನು ನೀಡಿ ವಿವಾಧಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ತಮ್ಮ ಹೆಂಡತಿಗೆ ದೈಹಿಕ ಕಿರುಕುಳ ನೀಡಿ, ತಮ್ಮ ವಿವಾಧಗಳ ಅಕೌಂಟ್ ತೆರೆದ ದರ್ಶನ್, ಇಲ್ಲಿಯ ವರೆಗೂ ಹಿಂತಿರುಗಿ ನೋಡಿಲ್ಲ. ತೆರೆಯ ಮೇಲೆ ಡೈಲಾಗ್ ಹೊಡೆಯುವ ಹೀರೊಗಳೆಲ್ಲ ನಿಜ ಜೀವನದಲ್ಲಿ ವಿಲನ್ ಆಗಿರುತ್ತಾರೆ ಎಂಬುದಕ್ಕೆ ದರ್ಶನ್ ಗಿಂತಲೂ ಬೇರೆ ಉದಾಹರಣೆಯಿಲ್ಲ.

ಈಗ ಮತ್ತೆ ರೈತರ ಕಷ್ಟಗಳನ್ನು ಸರಿಯಾಗಿ ಆಲಿಸದೆ, ಸಾಲ ಮನ್ನಾ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕೆ ಮತ್ತೆ ರೈತ ಸಮುಧಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಕುರಿತು ಮಾತನಾಡಿದ ರೈತ ಮುಖಂಡ, ದರ್ಶನ್ ಇನ್ನು ಸಣ್ಣ ವಯಸ್ಸಿನವರು. ಸರಿಯಾಗಿ ತಿಳುವಳಿಕೆ ಇಲ್ಲದ ಕಾರಣ ಹೀಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ರೈತರು ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದಾರೆ. ದರ್ಶನ್ ಅವರಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಷ್ಟ ಗೊತ್ತಿಲ್ಲ. ರೈತರ ಬಗ್ಗೆ ವಿಷಯಗಳು ಗೊತ್ತಿಲ್ಲದಿದ್ದರೆ, ನಮ್ಮೊಂದಿಗೆ ಚರ್ಚಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು. ರಾಜಕೀಯ ಭರಾಟೆಯಲ್ಲಿ ತಮಗೆ ತೋಚಿದ್ದನ್ನು ಮಾತನಾಡಿರಬಹುದು ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಜೀವದ ಅರಿವಿಲ್ಲದೆ ದರ್ಶನ್ ಮಾತನಾಡುತ್ತಿದ್ದಾರೆ. ಬೆಂಬಲ ಬೆಲೆ ಎನ್ನುವುದೇ ಮೂರ್ಖತನದ ಮಾತು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬದಲಾಗಿ ಸರ್ಕಾರ ಯೋಗ್ಯ ಬೆಲೆ ನೀಡಬೇಕು ಎಂಬುವುದು ನಮ್ಮ ವಾದ ಮತ್ತು ಹೋರಾಟ. ಬೆಂಬಲ ಬೆಲೆ ಎಂಬ ಪದವನ್ನು ಮೋಸಗಾರರು ಮತ್ತು ತಂತ್ರಗಾರರು ಬಳಸುತ್ತಾರೆ. ದರ್ಶನ್ ತಮ್ಮ ಸಿನಿಮಾಗೆ ಅರ್ಧ ಸಂಭಾವನೆ ತೆಗೆದುಕೊಳ್ಳುತ್ತೀನಿ ಎಂದು ಹೇಳಲಿ. ಅರ್ಧ ಸಂಭಾವನೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡೋಕ್ಕೆ ಆಗುತ್ತಾ ಅಂತಾ ನೋಡುತ್ತೇವೆ. ಚಿತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕ ಸಂಭಾವನೆ ಪಡೆಯುವ ಹಾಗೆ ರೈತರ ಬೆಳೆಗಳಿಗೂ ಯೋಗ್ಯ ಬೆಲೆ ನೀಡಬೇಕು. ರೈತರ ಶ್ರಮಕ್ಕೆ ಗೌರವವಾದ ಯೋಗ್ಯ ಬೆಲೆ ಬಂದಾಗ ಯಾರು ಸಾಲಮನ್ನಾ ಕೇಳುತ್ತಾರೆ. ದರ್ಶನ್ ಚಿಕ್ಕ ವಯಸ್ಸಿನವರಾಗಿದ್ದು, ಮುಂದಿನ ದಿನಗಳಲ್ಲಿ ತಿಳಿದು ಮಾತನಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

One thought on “ದರ್ಶನ್ ಇನ್ನು ಎಳಸು, ತಿಳುವಳಿಕೆ ಇಲ್ಲದೇ ಹೀಗೆ ಮಾತನಾಡುತ್ತಾರೆ – ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

  1. dhananjaya says:

    even balithavna ivanappan

Leave a Reply