‘ಸ್ಟಾರ್ಟ್ ಅಪ್’ ಗೆ ಅತ್ಯುತ್ತಮವಾದ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಸಿಲಿಕಾನ್ ಸಿಟಿ ನಂ. 1; ಜಗತ್ತಿನಲ್ಲಿ 11ನೇ ಸ್ಥಾನ…!

ಆಕಡೆ ಡೆಲ್ಲಿ ಈಕಡೆ ಮುಂಬೈ ಪಕ್ಕದಲ್ಲಿ ಆಂಧ್ರ ಸೈಡಲ್ಲಿ ಚೆನ್ನೈ ಇದ್ದರೂನು ದೇಶದ ಜನರೆಲ್ಲ ಮೂಲೆ ಮೂಲೆಯಿಂದ ತಮ್ಮ ಜೀವನ ಕಟ್ಟಿಕೊಳ್ಳಲು ಮುಗಿಬಿದ್ದು ಬೆಂಗಳೂರಿಗೆ ಬರುವುದು, ಇಲ್ಲಿ ಕೇವಲ ಜನ ಉದ್ಯೋಗ ಹುಡುಕಿಕೊಂಡು ಬರುವುದಿಲ್ಲ, ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸುವಂತ ವಿನೂತನ ‘ಸ್ಟಾರ್ಟ್ ಅಪ್’ ಗಳ ಚಿಂತನೆಗಳನ್ನು ಹೊತ್ತು ಬರುತ್ತಾರೆ ಎಂಬ ನಂಬಿಕೆಯಿಂದ. ಒಂದು ನಗರದಲ್ಲಿ ಅತ್ಯುತ್ತಮ ಸ್ಟಾರ್ಟ್ ಅಪ್ ಗಳು ಪುಟಿದೇಳುತ್ತಿವೆ ಎಂದರೆ ಆ ನಗರ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಅರ್ಥ.

ಈಗ ಬೆಂಗಳೂರು ‘ಸ್ಟಾರ್ಟ್ ಅಪ್’ ಗೆ ಅತ್ಯುತ್ತಮವಾದ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ನಂ. 1 ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ ಇಡೀ ಜಗತ್ತಿನಲ್ಲಿ ಒಂದು ಸ್ಟಾರ್ಟ್ ಅಪ್ ಶುರು ಮಾಡಲು ಅತ್ಯಂತ ಯೋಗ್ಯ ನಗರಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಗರ ಟೋಕಿಯೋ, ಪ್ಯಾರಿಸ್ ನಂತಹ ಪ್ರಖ್ಯಾತ ನಗರಗಳನ್ನು ಸಡ್ಡು ಹೊಡೆಯುವಲ್ಲಿ ಯಶಸ್ವಿಯಾಗಿರುವುದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದೆ.

ಎಲ್ಲೆಂದರಲ್ಲಿ ಒಂದು ‘ಸ್ಟಾರ್ಟ್ ಅಪ್’ ಶುರು ಮಾಡಲು ಸಾಧ್ಯವಿಲ್ಲ. ಕಚ್ಚಾ ವಸ್ತುಗಳು ಲಭ್ಯತೆ, ರಸ್ತೆ ಗುಣಮಟ್ಟ, ವಿದ್ಯುತ್, ನೀರು ಸರಬರಾಜು ಹೀಗೆ ಹಲವಾರು ಅಂಶಗಳು ಕಾರಣವಾಗುತ್ತದೆ. ನಮ್ಮ ನಗರ ಇಂತ ಸಾಧನೆ ಮಾಡಲು ಆರಂಭಿಕ ಹಂತದಲ್ಲಿ ಅಚ್ಚುಕಟ್ಟಾದ ಅಡಿಪಾಯ ಹಾಕಿಕೊಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗು ಈಗ ಶ್ರಮಿಸುತ್ತಿರುವ ಮೈತ್ರಿ ಸರ್ಕಾರಕ್ಕೆ ಧನ್ಯವಾದ ಹೇಳಬೇಕು.

Leave a Reply